Home ಕರಾವಳಿ ಮಂಗಳೂರಿಗೂ ಬಂದ ಗೋಣಿ ಚೀಲದ ಡ್ರೆಸ್ಸ್

ಮಂಗಳೂರಿಗೂ ಬಂದ ಗೋಣಿ ಚೀಲದ ಡ್ರೆಸ್ಸ್

ಮಂಗಳೂರು: ಗೋಣಿ ಚೀಲದಿಂದ ತಯಾರಿಸಿದ ಬಟ್ಟೆ ಇದೀಗ ಮಂಗಳೂರಿಗೆ ಬಂದಿದೆ.

ನಗರದ ಕಂಕನಾಡಿಯ ಶಾಲಿಮಾರ್ ಕಾಂಪ್ಲೆಕ್ಷ್’ನಲ್ಲಿರುವ ಮೈ ಚಾಯಿಸ್ (My Choice) ಮಳಿಗೆಯಲ್ಲಿ ಗೋಣಿ ಚೀಲ ಬಟ್ಟೆ ಗಮನ ಸೆಳೆಯುತ್ತಿದೆ.


ನಟಿ ಉರ್ಫಿ ಜಾವೇದ್ ಗೋಣಿ ಚೀಲವನ್ನು ಬಳಸಿಕೊಂಡು ಅದನ್ನ ತುಂಡುಮಾಡಿ ಬಟ್ಟೆಯ ವಿನ್ಯಾಸದ ಆಕೃತಿಯಲ್ಲಿ ರಚಿಸಿ ಧರಿಸಿದ್ದ ವೀಡಿಯೋ ವೈರಲ್ ಆದ ಬಳಿಕ ಗೋಚಿ ಚೀಲ ಬಟ್ಟೆ ಹೆಚ್ಚು ಜನಪ್ರಿಯವಾಗಿತ್ತು. ಹಲವು ವಿನ್ಯಾಸಕಾರರು ಇದನ್ನೇ ಪ್ರೇರಣೆಯಾಗಿಟ್ಟುಕೊಂಡು ಗೋಣಿ ಚೀಲದಿಂದ ಪ್ಯಾಂಟ್, ಅಂಗಿ ಮತ್ತಿತರ ವಸ್ತ್ರಗಳನ್ನು ತಯಾರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದರು.


ಮಂಗಳೂರಿನ ಮೈ ಚಾಯಿಸ್ ಬಟ್ಟೆ ಮಳಿಗೆಯಲ್ಲೂ ಗೋಣಿ ಚೀಲದ ಅಂಗಿ ವಿಂಡೋ ಪ್ರದರ್ಶನಕ್ಕಿಟ್ಟಿದ್ದಾರೆ. ಇದರ ಬೆಲೆ Rs.4,899/- ನಿಗದಿಪಡಿಸಲಾಗಿದೆ ಎಂದು ಮಳಿಗೆ ಮಾಲಕ ತಿಳಿಸಿದರು.

Join Whatsapp
Exit mobile version