ಪೊಲೀಸರ ನಿದ್ದೆಗೆಡಿಸಿತು ‘ಗೂಂಡಾ ಸೇವೆ’ಯ ಜಾಹೀರಾತು!

Prasthutha|

ಲಖನೌ : ಬಹುಷಃ ಸಿನೆಮಾಗಳಲ್ಲಿ ಕಾಮಿಡಿಗೋಸ್ಕರ ಇಂತಹ ದೃಶ್ಯಗಳನ್ನು ನೀವು ನೋಡಿರುತ್ತೀರಾ…! ಆದರೆ, ಉತ್ತರ ಪ್ರದೇಶ ಗೂಂಡಾ ಗ್ಯಾಂಗ್ ಒಂದು ನಿಜ ಜೀವನದಲ್ಲೇ ರೌಡಿಸಂಗೆ ‘ಡಿಜಿಟಲ್ ಜಾಹೀರಾತು’ ನೀಡಿ ಪೊಲೀಸರ ಅತಿಥಿಯಾಗಿದ್ದಾರೆ.

ಡಿಜಿಟಲ್‌ ಮಾಧ್ಯಮದ ಮೂಲಕ ತಮ್ಮ ‘ಸೇವೆ’ಯ ಕುರಿತು ಜಾಹೀರಾತು ನೀಡಿದ್ದ ಗೂಂಡಾ ಗ್ಯಾಂಗ್ ಒಂದು, ವಿವಿಧ ‘ಗೂಂಡಾ ಸೇವೆ’ಯ ದರಪಟ್ಟಿ ಪ್ರಕಟಿಸಿತ್ತು. ಕೈಕಾಲು ಮುರಿದರೆ 5,000 ರೂ. , ಧಮಕಿ ಹಾಕಬೇಕಾದರೆ 1,000 ರೂ, ಹಾಫ್ ಮರ್ಡರ್‌ಗೆ 25,000 ರೂ., ಮರ್ಡರ್‌ಗೆ 55,000 ರೂ. ಎಂಬ ಜಾಹೀರಾತೊಂದನ್ನು ಈ ಗ್ಯಾಂಗ್ ಪ್ರಕಟಿಸಿತ್ತು. ಜಾಹೀರಾತನ್ನು ನೋಡಿ ಯು.ಪಿ. ಪೊಲೀಸರು ಬೆಚ್ಚಿಬಿದ್ದಿದ್ದರು.

- Advertisement -

ತಕ್ಷಣ ಜಾಗೃತಗೊಂಡ ಪೊಲೀಸರು ಸಾಮಾಜಿಕ ಜಾಲತಾಣಗಳಲ್ಲಿ ಹರಡಲಾಗಿದ್ದ ಈ ಜಾಹೀರಾತನ್ನು ನೀಡಿದ್ದ ಗ್ಯಾಂಗ್ ಅನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ದರ ಪಟ್ಟಿಯ ಜೊತೆಗೆ ಪಿಸ್ತೂಲು ಹಿಡಿದುಕೊಂಡ ಒಬ್ಬ ಯುವಕನ ಫೋಟೊ ಕೂಡ ಇತ್ತು. ಇದು ಆರೋಪಿಗಳನ್ನು ತ್ವರಿತವಾಗಿ ಪತ್ತೆಹಚ್ಚಲು ಪೊಲೀಸರಿಗೆ ನೆರವಾಯಿತು.

- Advertisement -