Home ಟಾಪ್ ಸುದ್ದಿಗಳು ಗನ್ ಟ್ರೈನಿಂಗ್ ಕೊಟ್ರಾ ಸೂಲಿಬೆಲೆ: ಸುಮೋಟೋ ಕೇಸ್ ದಾಖಲಿಸಲು ಮನವಿ

ಗನ್ ಟ್ರೈನಿಂಗ್ ಕೊಟ್ರಾ ಸೂಲಿಬೆಲೆ: ಸುಮೋಟೋ ಕೇಸ್ ದಾಖಲಿಸಲು ಮನವಿ

ಬೆಂಗಳೂರು: ಯುವ ಬ್ರಿಗೇಡ್ ನ ಚಕ್ರವರ್ತಿ ಸೂಲಿಬೆಲೆ, ಯುವಕರಿಗೆ ಶಸ್ತ್ರಾಸ್ತ್ರ ತರಬೇತಿ ನೀಡಿದ್ದಾರೆ ಎನ್ನಲಾಗುತ್ತಿರುವ ವೀಡಿಯೋವೊಂದು ವೈರಲ್ ಆಗಿದ್ದು ಸಾರ್ವಜನಿಕ ವಲಯಗಳಲ್ಲಿ ಆಕ್ರೋಶ ವ್ಯಕ್ತವಾಗುತ್ತಿವೆ.

ಯುವಕರ ಗುಂಪೊಂದು ಕೈಯ್ಯಲ್ಲಿ ದೊಣ್ಣೆ ,ತಲವಾರು ಮಾದರಿಯ ವಸ್ತುಗಳನ್ನು ಹಿಡಿದುಕೊಂಡಿದ್ದು ವೀಡಿಯೋದಲ್ಲಿ ಕಂಡುಬಂದಿದೆ. ಸ್ಥಳದಲ್ಲಿದ್ದ ಸೂಲಿಬೆಲೆ ಯುವಕರಿಗೆ ಶಿವಾಜಿ ಘೋಷಣೆ ಹೇಳಿಕೊಡುತ್ತಿರುವ ದೃಶ್ಯ ವೀಡಿಯೋದಲ್ಲಿ ಸೆರೆಯಾಗಿದೆ.

ಮುಸ್ಲಿಮರ ವಿರುದ್ಧ ಭಯೋತ್ಪಾದನಾ ಆರೋಪ ಮಾಡುವ ಸೂಲಿಬೆಲೆ ಇದೀಗ ಭಯೋತ್ಪಾದನಾ ಕೃತ್ಯಕ್ಕೆ ನೇತೃತ್ವ ಕೊಡುತ್ತಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ. ಇಂತಹ ಅನಧಿಕೃತ ತರಬೇತಿ ಶಿಬಿರಕ್ಕೆ ಅನುಮತಿ ಕೊಟ್ಟವರು ಯಾರು? ಹೀಗೆ ಯುವಕರಿಗೆ ಶಸ್ತ್ರಾಸ್ತ್ರ ತರಬೇತಿ ನೀಡುವುದು ಕಾನೂನು ಬಾಹಿರವಲ್ಲವೇ? ಎಂದು ಸಾಮಾಜಿಕ ಜಾಲತಾಣಗಳಲ್ಲಿ ಜನರು ಪ್ರಶ್ನಿಸುತ್ತಿದ್ದಾರೆ.

ಸೂಲಿಬೆಲೆ ಮತ್ತು ಅಲ್ಲಿರುವ ಯುವಕರ ವಿರುದ್ಧ ಪೊಲೀಸರು UAPA ಅಡಿಯಲ್ಲಿ ಸ್ವಯಂ ಪ್ರೇರಿತ ಕೇಸು ದಾಖಲಿಸಬೇಕು ಮತ್ತು ಸಮಾಜದಲ್ಲಿ ಅಹಿತಕರ ಘಟನೆ ನಡೆಯದಂತೆ ಸುವ್ಯವಸ್ಥೆ ಕಾಪಾಡಬೇಕು ಎಂದು ಮನವಿ ಮಾಡಿದ್ದಾರೆ.

Join Whatsapp
Exit mobile version