Home ಟಾಪ್ ಸುದ್ದಿಗಳು ಬಸ್ ನಿಲ್ದಾಣದಲ್ಲಿ ಗುಂಬಝ್ ವಿವಾದ: ವಾರದೊಳಗೆ ನಿಲ್ದಾಣ ತೆರವುಗೊಳಿಸಲು ಹೆದ್ದಾರಿ ಪ್ರಾಧಿಕಾರ ನೋಟಿಸ್

ಬಸ್ ನಿಲ್ದಾಣದಲ್ಲಿ ಗುಂಬಝ್ ವಿವಾದ: ವಾರದೊಳಗೆ ನಿಲ್ದಾಣ ತೆರವುಗೊಳಿಸಲು ಹೆದ್ದಾರಿ ಪ್ರಾಧಿಕಾರ ನೋಟಿಸ್

ಮೈಸೂರು: ಮೈಸೂರಿನಲ್ಲಿ ಸದ್ಯ ನಿರ್ಮಿಸಲಾಗಿರುವ ಗುಂಬಝ್ ಅನ್ನು ಹೋಲುವ ಬಸ್ ನಿಲ್ದಾಣವನ್ನು ಗಂಭೀರವಾಗಿ ತೆಗೆದುಕೊಂಡಿರುವ ಹೆದ್ದಾರಿ ಪ್ರಾಧಿಕಾರ, ತಕ್ಷಣ ಈ ಬಸ್ ತಂಗುದಾಣವನ್ನು ತೆರವುಗೊಳಿಸುವಂತೆ ಮೈಸೂರು ಮಹಾನಗರ ಪಾಲಿಕೆಗೆ ನೋಟಿಸ್ ನೀಡಿದೆ.

ಅನಧಿಕೃತವಾಗಿ ನಿರ್ಮಿಸಲಾಗಿರುವ ಈ ಬಸ್ ನಿಲ್ದಾಣವನ್ನು ಒಂದು ವಾರದೊಳಗೆ ತೆರವುಗೊಳಿಸುವಂತೆ ಹೆದ್ದಾರಿ ಪ್ರಾಧಿಕಾರ ಜಾರಿಗೊಳಿಸಿದ ನೋಟಿಸ್’ನಲ್ಲಿ ಉಲ್ಲೇಖಿಸಲಾಗಿದೆ ಎಂದು ಹೇಳಲಾಗಿದೆ.

ಪ್ರಸಕ್ತ ಈ ವಿಚಾರ ಕೋಮು ಆಧಾರಿತ ಸಮಸ್ಯೆಯಾಗಿ ಮಾರ್ಪಾಡಾಗಿದ್ದು, ಈ ಬಸ್ ನಿಲ್ದಾಣವನ್ನು ಒಂದು ವಾರದೊಳಗೆ ತೆರವುಗೊಳಿಸಬೇಕು. ಇದಕ್ಕೆ ತಪ್ಪಿದರೆ ಹೆದ್ದಾರಿ ಪ್ರಾಧಿಕಾರ ಕಾಯ್ದೆ 2003ರ ಅನ್ವಯ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಹೆದ್ದಾರಿ ಪ್ರಾಧಿಕಾರದ ಯೋಜನೆ ನಿರ್ದೇಶಕರು ನೋಟಿಸ್’ನಲ್ಲಿ ಮಾಹಿತಿ ನೀಡಿದ್ದಾರೆ.

ಬಸ್ ನಿಲ್ದಾಣದಲ್ಲಿ ಗುಂಬಝ್ ಅನ್ನು ಹೋಲುವ ಗೋಪುರವನ್ನು ಕಟ್ಟಲಾಗಿದ್ದು, ಇದು ಇಸ್ಲಾಂ ಸಂಸ್ಕೃತಿಯನ್ನು ಹೇರುವ ಮುಂದುವರಿದ ಭಾಗ. ಈ ನಿಟ್ಟಿನಲ್ಲಿ ಬಸ್ ನಿಲ್ದಾಣವನ್ನು ಎರಡು ದಿನಗಳಲ್ಲಿ ತೆರವುಗೊಳಿಸದಿದ್ದರೆ ಜೆಸಿಬಿ ತಂದು ನೆಲಸಮಗೊಳಿಸುವುದಾಗಿ ಮೈಸೂರು ಸಂಸದ ಪ್ರತಾಪ್’ಸಿಂಹ ಎಚ್ಚರಿಸಿದ್ದರು. ಇದಾದ ಬೆನ್ನಲ್ಲೇ ಸದ್ಯ ಈ ಬಸ್ ನಿಲ್ದಾಣಕ್ಕೆ ಸಂಬಂಧಿಸಿದಂತೆ ಹೆದ್ದಾರಿ ಪ್ರಾಧಿಕಾರ, ಪಾಲಿಕೆಗೆ ನೋಟಿಸ್ ಜಾರಿಗೊಳಿಸಿದೆ.

Join Whatsapp
Exit mobile version