ಗುಲ್ಬರ್ಗಾ: ಪ್ರಮುಖ ಸೂಫೀ ವರ್ಯ ಹಝ್ರತ್ ಶೈಖ್ ತಾಜುದ್ದೀನ್ ಜುನೈದೀ ಇಂದು ಬೆಳಿಗ್ಗೆ ನಿಧನರಾಗಿದ್ದಾರೆ.
ವಯೋಸಹಜ ಅನಾರೋಗ್ಯದಿಂದಾಗಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಹೈದರಾಬಾದ್ ಕರ್ನಾಟಕದ ಸುನ್ನಿಗಳ ಆಧ್ಯಾತ್ಮಿಕ ಮಾರ್ಗದರ್ಶಕರಾಗಿರುವ ಇವರು, ಸಹಸ್ರಾರು ಅನುಯಾಯಿಗಳನ್ನು ಹೊಂದಿದ್ದಾರೆ.
ಉತ್ತರ ಕರ್ನಾಟಕದಲ್ಲಿ ತಾಜ್ ಬಾಬಾ ಎಂದೇ ಖ್ಯಾತರಾಗಿರುವ ಇವರು ಅಪಾರ ಅನುಯಾಯಿಗಳನ್ನು ಅಗಲಿದ್ದಾರೆ. ನಾಳೆ ಜುಮಾ ನಮಾಝ್ ನ ಬಳಿಕ ಗುಲ್ಬರ್ಗಾದ ಜುನೈದೇ ದರ್ಬಾರಿನಲ್ಲಿ ಧಫನ ಕಾರ್ಯ ನಡೆಯಲಿದೆ.