Home ಟಾಪ್ ಸುದ್ದಿಗಳು ಪ್ರಧಾನಿ ಕಚೇರಿಯ ಅಧಿಕಾರಿ ಎಂದು ಪೋಸು ನೀಡಿ ಸೇನಾ ಭದ್ರತೆ ಪಡೆದು ಕಾಶ್ಮೀರ ಕಣಿವೆಯಲ್ಲಿ ಸುತ್ತಾಡಿದ...

ಪ್ರಧಾನಿ ಕಚೇರಿಯ ಅಧಿಕಾರಿ ಎಂದು ಪೋಸು ನೀಡಿ ಸೇನಾ ಭದ್ರತೆ ಪಡೆದು ಕಾಶ್ಮೀರ ಕಣಿವೆಯಲ್ಲಿ ಸುತ್ತಾಡಿದ ಗುಜರಾತ್’ನ ವಂಚಕ ಪೊಲೀಸ್ ಬಲೆಗೆ

ನವದೆಹಲಿ: ನಾನು ಪ್ರಧಾನಿ ಕಚೇರಿಯಲ್ಲಿ ಹೆಚ್ಚುವರಿ ನಿರ್ದೇಶಕ ಎಂದು ಪೋಸು ನೀಡಿ ಉನ್ನತ ಮಟ್ಟದ ಭದ್ರತೆಯನ್ನು ಪಡೆದು ಕಾಶ್ಮೀರ ಕಣಿವೆಯ ಐಷಾರಾಮಿ ಪಂಚತಾರಾ ಹೋಟೆಲ್’ನಲ್ಲಿ ಹಲವು ಬಾರಿ ತಂಗಿ ವಂಚಿಸಿದ್ದ ಗುಜರಾತ್’ನ ನಯ ವಂಚಕ ಡಾ.ಕಿರಣ್ ಪಟೇಲ್’ ಎಂಬಾತನನ್ನು ಕೊನೆಗೂ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಬಂಧಿಸಿದ್ದಾರೆ.


ನನ್ನ ಹೆಸರು ಕಿರಣ್ ಪಟೇಲ್. ನಾನು ಪ್ರಧಾನ ಮಂತ್ರಿಗಳ ಕಚೇರಿಯ (PMO) ಹಿರಿಯ ಅಧಿಕಾರಿ ಎಂದು ಸುಳ್ಳು ಹೇಳಿ ಕಳೆದ ಅಕ್ಟೊಬರ್ ತಿಂಗಳಿಂದ ಫೆಬ್ರುವರಿವರೆಗೆ ಐದು ತಿಂಗಳು ಕಾಲ ಇಡೀ ದೇಶಕ್ಕೆ ಮೋಸ ಮಾಡಿರುವ ಕಿರಣ್ ಪಟೇಲ್, ದೇಶದ ಸುರಕ್ಷತೆಗೆ ದೊಡ್ಡ ಸವಾಲು ತಂದೊಡ್ಡಿದ್ದಾನೆ.


CRPF ಮತ್ತು ಕಾಶ್ಮೀರ ಪೊಲೀಸರ ಭಾರಿ ಭದ್ರತೆ, ಬೆಂಗಾವಲು ಪಡೆಯೊಂದಿಗೆ ಪಾಕ್ ಗಡಿಯಲ್ಲಿರುವ ಸೇನಾ ಕಚೇರಿಗಳು, ಅಂತಾರಾಷ್ಟ್ರೀಯ ಗಡಿ ರೇಖೆ (LOC), ಬಾರಾಮುಲ್ಲಾ ಸೇನಾ ಕ್ಯಾಂಪ್, ಶ್ರೀನಗರದ ಲಾಲ್ ಚೌಕ್ ಸೇರಿದಂತೆ ದೇಶದ ಭದ್ರತೆ, ಸುರಕ್ಷತೆಗೆ ಸಂಬಂಧಿಸಿದ ಇನ್ನೂ ಅನೇಕ ಸ್ಥಳಗಳಿಗೆ ಭೇಟಿ ನೀಡಿದ್ದಾನೆ. ಸೇನೆಯ ಹಿರಿಯ ಅಧಿಕಾರಿಗಳೊಂದಿಗೆ ಹಲವು ಸುತ್ತಿನ ಬೈಠಕ್ ನಡೆಸಿ ಸೂಕ್ಷ್ಮ ಮಾಹಿತಿ, ವಿವರ ಪಡೆದಿದ್ದಾನೆ. ಈತ ನಕಲಿ ಅಧಿಕಾರಿ ಎಂದು ಗೊತ್ತಾದ ಮೇಲೆ ಈಗ ಈತನನ್ನು ಬಂಧಿಸಲಾಗಿದೆ. ಈತನೂ ಗುಜರಾತ್ ಮೂಲದ ವಂಚಕ ಎಂದು ಹಿರಿಯ ಪತ್ರಕರ್ತ ಅಭಿನವ್ ಪಾಂಡೆ ಎಂಬವರು ಟ್ವೀಟ್ ಮಾಡಿದ್ದಾರೆ.

Join Whatsapp
Exit mobile version