Home ಟಾಪ್ ಸುದ್ದಿಗಳು ತನ್ನನ್ನು ತಾನೇ ಮದುವೆಯಾಗುತ್ತಿದ್ದಾಳೆ ಗುಜರಾತಿ ಯುವತಿ: ಗೋವಾದಲ್ಲಿ ಹನಿಮೂನ್

ತನ್ನನ್ನು ತಾನೇ ಮದುವೆಯಾಗುತ್ತಿದ್ದಾಳೆ ಗುಜರಾತಿ ಯುವತಿ: ಗೋವಾದಲ್ಲಿ ಹನಿಮೂನ್

ಗಾಂಧೀನಗರ: ಗುಜರಾತ್ ಮೂಲದ 24 ವರ್ಷದ ಯುವತಿ ತನ್ನನ್ನು ತಾನೇ ಜೂನ್ 11 ರಂದು ಮದುವೆ ಯಾಗುವ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾಳೆ.

ಗುಜರಾತ್‍ನ ವಡೋದರದ ಖಾಸಗಿ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕ್ಷಮಾ, ತನ್ನನ್ನು ತಾನೇ ವಿವಾಹವಾಗುತ್ತಿದ್ದಾಳೆ. ಅಲ್ಲದೇ ಮದುವೆಯ ಎಲ್ಲ ವಿಧಿ-ವಿಧಾನಗಳ ಬಳಿಕ ಎರಡು ವಾರಗಳ ಕಾಲ ಹನಿಮೂನ್‍ಗೆ ಗೋವಾಕ್ಕೆ ತೆರಳುತ್ತೇನೆ ಎಂದು ಹೇಳಿದ್ದಾಳೆ.

ಈ ಕುರಿತಂತೆ ಮಾಧ್ಯಮದವರೊಂದಿಗೆ ಪ್ರತಿಕ್ರಿಯಿಸಿದ ಕ್ಷಮಾ, ಇದು ಭಾರತದ ಮೊದಲ ಏಕವ್ಯಕ್ತಿ ವಿವಾಹವಾಗಲಿದೆ. ನಾನು ಎಂದಿಗೂ ಮದುವೆಯಾಗುವುದಕ್ಕೆ ಬಯಸಿಲ್ಲ. ಆದರ ವಧು ಆಗಬೇಕೆಂಬ ಆಸೆ ಇತ್ತು. ಹೀಗಾಗಿ ನನ್ನನ್ನು ನಾನೇ ಮದುವೆಯಾಗಲು ನಿರ್ಧರಿಸಿದೆ ಎಂದು ಹೇಳಿದ್ದಾಳೆ.

Join Whatsapp
Exit mobile version