Home ಟಾಪ್ ಸುದ್ದಿಗಳು ಗುಜರಾತಿನಲ್ಲಿ ಮೊದಲ ರೂಪಾಂತರಿ ಓಮಿಕ್ರಾನ್ XE ವೈರಸ್ ಪತ್ತೆ: ವರದಿ

ಗುಜರಾತಿನಲ್ಲಿ ಮೊದಲ ರೂಪಾಂತರಿ ಓಮಿಕ್ರಾನ್ XE ವೈರಸ್ ಪತ್ತೆ: ವರದಿ

ಸೂರತ್: ಮೊದಲ ರೂಪಂತರಿ ಓಮಿಕ್ರಾನ್ XE ವೈರಸ್ ಗುಜರಾತಿನಲ್ಲಿ ಪತ್ತೆಯಾಗಿದ್ದು, ಮುಂಬೈ ಮೂಲದ ವ್ಯಕ್ತಿಯೊಬ್ಬರು ವಡೋದರಗೆ ಭೇಟಿ ನೀಡಿದಾಗ ನಡೆಸಿದ ಪರೀಕ್ಷೆಯ ವೇಳೆ ಈ ಪ್ರಕರಣ ದೃಢಪಟ್ಟಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಳೆದ ತಿಂಗಳು ಆ ವ್ಯಕ್ತಿ ಪರೀಕ್ಷೆ ನಡೆಸಿದ್ದರು ಮತ್ತು ನಂತರ ಮುಂಬೈಗೆ ಮರಳಿದ್ದರು. ಆದರೆ ಈತನಲ್ಲಿ ಶುಕ್ರವಾರ ಓಮಿಕ್ರಾನ್ XE ವೈರಸ್ ದೃಢಪಟ್ಟಿದ್ದು, ವ್ಯಕ್ತಿಯ ಪ್ರಸಕ್ತ ಪರಿಸ್ಥಿತಿಯ ಬಗ್ಗೆ ಬರೋಡ ಅಧಿಕಾರಿಗಳಿಗೆ ಮಾಹಿತಿ ಇಲ್ಲ ಎಂದು ಅವರು ತಿಳಿಸಿದ್ದಾರೆ.

ಈ ಮಧ್ಯೆ ಓಮಿಕ್ರಾನ್ XE ವೈರಸ್ ಹಿಂದಿನವುಗಳಿಗಿಂತ ಹೆಚ್ಚು ಪರಿಣಾಮಕಾರಿಯಾಗಿ ಹರಡಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.

ಮುಂಬೈನ ಸಾಂತಾಕ್ರೂಝ್ ವ್ಯಕ್ತಿಯೊಬ್ಬರು ಮಾರ್ಚ್ 12 ರಂದು ವಡೋದರಾಗೆ ಭೇಟಿ ನೀಡಿದಾಗ ಕೋವಿಡ್ 19 ಪರೀಕ್ಷೆ ನಡೆಸಿದ್ದರು. ಅವರ ಪತ್ನಿ ಕೂಡ ಅವರ ಜೊತೆಗಿದ್ದರು ಎಂದು ಮುನ್ಸಿಪಾಲ್ ಕಾರ್ಪೋರೇಶನ್ ವೈದ್ಯಾಧಿಕಾರಿ ದೇವೇಶ್ ಪಟೇಲ್ ತಿಳಿಸಿದ್ದಾರೆ.

Join Whatsapp
Exit mobile version