Home ಟಾಪ್ ಸುದ್ದಿಗಳು ‘ಗುಜರಾತ್ ಪಾಕಿಸ್ತಾನವಲ್ಲ’: ದೇವೇಂದ್ರ ಫಡ್ನವಿಸ್

‘ಗುಜರಾತ್ ಪಾಕಿಸ್ತಾನವಲ್ಲ’: ದೇವೇಂದ್ರ ಫಡ್ನವಿಸ್

►ರಾಜ್ಯಕ್ಕೆ ಬರಬೇಕಾದ ಯೋಜನೆ ಕಳೆದುಕೊಂಡದ್ದನ್ನು ಸಮರ್ಥಿಸಿದ ಮಹಾರಾಷ್ಟ್ರ ಡಿಸಿಎಂ


ಮುಂಬೈ: ಮಹಾರಾಷ್ಟ್ರದಿಂದ ಗುಜರಾತ್ ಗೆ ಕೆಲವು ಯೋಜನೆಗಳನ್ನು ಸ್ಥಳಾಂತರಿಸುವ ಕುರಿತು ನಡೆಯುತ್ತಿರುವ ಟೀಕೆಗಳ ನಡುವೆ ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ನೆರೆಯ ಗುಜರಾತ್ ಪಾಕಿಸ್ತಾನವಲ್ಲ ಮತ್ತು ಕೆಲವು ಯೋಜನೆಗಳು ಇತರ ರಾಜ್ಯಗಳಿಗೆ ಹೋಗುವುದು ಸಹಜ ಎಂದು ಹೇಳಿದ್ದಾರೆ.


ಇಂಡಿಯಾ ಗ್ಲೋಬಲ್ ಫೋರಂ ನಲ್ಲಿ ಮಾಡಿದ ಭಾಷಣದಲ್ಲಿ ಫಡ್ನವಿಸ್, ನಾವು ಸ್ಪರ್ಧಾತ್ಮಕ ಫೆಡರಲಿಸಂ ಯುಗದಲ್ಲಿದ್ದೇವೆ ಮತ್ತು ಹೂಡಿಕೆಗಾಗಿ ಪೈಪೋಟಿ ನಡೆಸುತ್ತಿರುವ ರಾಜ್ಯಗಳ ಸಂಖ್ಯೆ ಕೇವಲ ಎರಡು-ಮೂರರಿಂದ 10 ಕ್ಕೆ ಏರಿದೆ, ಇದು ಸ್ವಾಗತಾರ್ಹ ಬೆಳವಣಿಗೆಯಾಗಿದೆ. “ಒಂದು ಕಂಪೆನಿಯು ಗುಜರಾತಿಗೆ ಹೋಗಬಹುದು, ಕರ್ನಾಟಕ, ಅಥವಾ ದೆಹಲಿಗೆ ಹೋಗಬಹುದು.. ಅದು ಪಾಕಿಸ್ತಾನವಲ್ಲ, ನಮ್ಮದೇ ದೇಶಕ್ಕೆ ಯೋಜನೆಗಳು ಹೋಗುತ್ತವೆ” ಎಂದು ಅವರು ಹೇಳಿದರು.

Join Whatsapp
Exit mobile version