Home ಟಾಪ್ ಸುದ್ದಿಗಳು ಗುಜರಾತ್: 450 ಕೋಟಿ ಮೌಲ್ಯದ ಹೆರಾಯಿನ್ ಪತ್ತೆ

ಗುಜರಾತ್: 450 ಕೋಟಿ ಮೌಲ್ಯದ ಹೆರಾಯಿನ್ ಪತ್ತೆ

ಅಹಮದಾಬಾದ್: ಗುಜರಾತ್ ಎಟಿಎಸ್ ಮತ್ತು ಡೈರೆಕ್ಟರೇಟ್ ಆಫ್ ರೆವೆನ್ಯೂ ಇಂಟೆಲಿಜೆನ್ಸ್ ಜಂಟಿ ಕಾರ್ಯಾಚರಣೆಯಡಿ, ಅಮ್ರೇಲಿ ಜಿಲ್ಲೆಯ ಪಿಪಾವಾವ್ ಬಂದರಿನಲ್ಲಿ ಸುಮಾರು 90 ಕೆಜಿ ಹೆರಾಯಿನ್ ವಶಪಡಿಸಿಕೊಳ್ಳಲಾಗಿದ್ದು, ಇದರ ಮೌಲ್ಯ ಸುಮಾರು 450 ಕೋಟಿ ಎಂದು ಹೇಳಲಾಗಿದೆ.


ಈ ಬಗ್ಗೆ ಮಾಹಿತಿ ನೀಡಿದ ಗುಜರಾತ್ ಡಿಜಿಪಿ ಆಶಿಶ್ ಭಾಟಿಯಾ, ಹೆರಾಯಿನ್ ವಶಪಡಿಸಿಕೊಂಡಿರುವ ಶಿಪ್ ಪಿಂಟ್ ಕಂಟೈನರ್ ಇರಾನ್ ನಿಂದ ತರಲಾಗಿದೆ. ಈ ಕಂಟೈನರ್ ಆಗಮನದ ಬಗ್ಗೆ ನಮಗೆ ಗುಪ್ತಚರ ಮಾಹಿತಿ ದೊರೆತಿತ್ತು. ನಂತರ ನಾವು ಅಲರ್ಟ್ ಆಗಿದ್ದೇವೆ ಎಂದು ಅವರು ಹೇಳಿದರು
ಕಳ್ಳಸಾಗಣೆದಾರರು ಹೆರಾಯಿನ್ ಅನ್ನು ದಪ್ಪ ಹಗ್ಗದಲ್ಲಿ ಕಟ್ಟಿ ಬಚ್ಚಿಟ್ಟಿದ್ದರು ಎಂದು ತಿಳಿಸಿದರು.

Join Whatsapp
Exit mobile version