Home ಟಾಪ್ ಸುದ್ದಿಗಳು ಗುಜರಾತ್ | ಪೊಲೀಸ್ ಠಾಣೆ ಆವರಣದಲ್ಲಿ ನಾಲ್ಕು ವರ್ಷ ಹಳೆಯ ಮಾನವ ಅಸ್ಥಿಪಂಜರ ಪತ್ತೆ!

ಗುಜರಾತ್ | ಪೊಲೀಸ್ ಠಾಣೆ ಆವರಣದಲ್ಲಿ ನಾಲ್ಕು ವರ್ಷ ಹಳೆಯ ಮಾನವ ಅಸ್ಥಿಪಂಜರ ಪತ್ತೆ!

ಸೂರತ್: ಸ್ವಚ್ಛಗೊಳಿಸುತ್ತಿದ್ದ ಸಂದರ್ಭ ಗುಜರಾತ್‌ನ ಪೊಲೀಸ್ ಠಾಣೆಯೊಂದರ ಆವರಣದಲ್ಲಿ ನಾಲ್ಕು ವರ್ಷ ಹಳೆಯ ಮಾನವ ಅಸ್ಥಿಪಂಜರ ಪತ್ತೆಯಾಗಿದೆ ಎಂದು ತಿಳಿದುಬಂದಿದೆ. ಖೋದರಾ ಪೊಲೀಸ್ ಠಾಣೆಯ ಆವರಣವನ್ನು ಸ್ವಚ್ಛಗೊಳಿಸುವಾಗ ಅಸ್ಥಿಪಂಜರ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಶಪಡಿಸಿಕೊಂಡ ವಾಹನಗಳನ್ನು ಕ್ರೇನ್‌ ಮೂಲಕ ಸ್ಥಳಾಂತರಿಸುತ್ತಿದ್ದಾಗ ಮಾನವ ಅಸ್ಥಿಪಂಜರ ಪತ್ತೆಯಾಗಿದೆ. ತಲೆಬುರುಡೆ ಮತ್ತು ಇತರ ಅಂಗಾಂಗಗಳು ಕಂಡುಬಂದಿವೆ. ಅಸ್ಥಿಪಂಜರವನ್ನು ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಎರಡು ವರ್ಷಗಳ ನಂತರ ಪೊಲೀಸ್ ಠಾಣೆಯ ಕಾಂಪೌಂಡನ್ನು ಶುಚಿಗೊಳಿಸಲಾಗಿದೆ ಎಂದು ಪೊಲೀಸರು ಹೇಳುತ್ತಾರೆ. ಅಸ್ಥಿಪಂಜರವು ನಾಲ್ಕು ವರ್ಷ ಹಳೆಯದು ಎಂದು ಅಂದಾಜಿಸಲಾಗಿದೆ.  

Join Whatsapp
Exit mobile version