Home ಟಾಪ್ ಸುದ್ದಿಗಳು ಗುಜರಾತ್ ಚುನಾವಣೆ: ವಂಶಾಡಳಿತ ಎಲ್ಲ ಪಕ್ಷಗಳ ತಲೆನೋವು

ಗುಜರಾತ್ ಚುನಾವಣೆ: ವಂಶಾಡಳಿತ ಎಲ್ಲ ಪಕ್ಷಗಳ ತಲೆನೋವು

ಅಹ್ಮದಾಬಾದ್: ಬಿಜೆಪಿ ಮತ್ತು ಪ್ರಧಾನಿ ಮೋದಿ ರಾಜಕೀಯದಲ್ಲಿ ವಂಶಾಡಳಿತವನ್ನು ಟೀಕಿಸುತ್ತಿದ್ದರೂ ಬಿಜೆಪಿಗೆ ಹಿಮಾಚಲ ಪ್ರದೇಶ, ಗುಜರಾತ್’ನ ಎಲ್ಲ ಕಡೆ ವಂಶಾಡಳಿತ ಟಿಕೆಟ್ ತಲೆನೋವು ಉಂಟಾಗಿದೆ.

ವಂಶಾಡಳಿತ ಎಂಬುದು ಯಾವುದೇ ಒಂದು ಪಕ್ಷಕ್ಕೆ ಸೀಮಿತವಾದ ಸಮಸ್ಯೆಯಾಗಿ ಉಳಿದಿಲ್ಲ.

ನಮ್ಮ ಪಕ್ಷದಲ್ಲಿ ವಂಶಾಡಳಿತ ಏನಿದ್ದರೂ ಬೇರೆ ಪಕ್ಷಗಳಿಂದ ಬಂದವರದ್ದು ಎಂದು ಬಿಜೆಪಿ ಮತ್ತು ಪ್ರಧಾನಿ ಮೋದಿ ಹೇಳುತ್ತಿದ್ದಾರೆ. ಆದರೆ ಬೇರೆ ಪಕ್ಷದಿಂದ ಬಂದವರೇ, ಬೇರೆ ಪಕ್ಷದಿಂದ ಕೊಂಡುಕೊಂಡವರೇ ಎಂದು ಪ್ರತಿ ಪಕ್ಷಗಳು ಕೇಳುವ ಮೂಲಕ ತಿರುಗೇಟು ನೀಡಿವೆ.

ಗೃಹ ಮಂತ್ರಿ ಅಮಿತ್ ಶಾ ಅವರ ಮಗ ಜಯ್ ಶಾ ಬಿಸಿಸಿಐ- ಭಾರತೀಯ ಕ್ರಿಕೆಟ್ ಮಂಡಳಿಯ ಅಧ್ಯಕ್ಷರಾದುದು ಹೇಗೆ ಎಂದು ಸಾಮಾಜಿಕ ಜಾಲ ತಾಣಗಳಲ್ಲಿ ಪ್ರಧಾನಿಯವರಿಗೆ ಪ್ರಶ್ನೆಗಳ ಸುರಿಮಳೆಗೈಯ್ಯಲಾಗುತ್ತಿದೆ? ಬಿಜೆಪಿಯಲ್ಲೂ ವಂಶಾಡಳಿತವೇ ತುಂಬಿದೆ ಎಂದು ಹಲವರು ಕೆಣಕಿದ್ದಾರೆ.

“ಪಿಯೂಶ್ ಗೋಯಲ್, ಅನುರಾಗ್ ಠಾಕೂರ್, ಸುವೇಂಧು ಅಧಿಕಾರಿ ಇವರೆಲ್ಲ ವಂಶಾಡಳಿತದಿಂದ ಬಂದವರಲ್ಲವೆ” ಎಂದು ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ ಶಮಾ ಮುಹಮ್ಮದ್ ಪ್ರಶ್ನಿಸಿದ್ದಾರೆ.

“ಇವೆಲ್ಲ ಜನರ ಮನಸ್ಸನ್ನು ಬೇರೆಡೆಗೆ ತಿರುಗಿಸುವ ರಾಜಕೀಯ ಅಷ್ಟೆ. ಪ್ರಧಾನಿಯವರು ನಿಜವಾದ ಸಮಸ್ಯೆಗಳಾದ ಬೆಲೆಯೇರಿಕೆ, ನಿರುದ್ಯೋಗ, ನೆರವೇರದ ಆಶ್ವಾಸನೆಗಳು, ತಮ್ಮ ವೈಫಲ್ಯಗಳಿಂದ ಜನರ ಗಮನ ಬೇರೆಡೆಗೆ ತಿರುಗಿಸಲು ವಂಶಾಡಳಿತ ಎನ್ನುತ್ತಾರೆ” ಎಂದು ಶಮಾ ತಿರುಗೇಟು ನೀಡಿದ್ದಾರೆ.

ಪಕ್ಷದೊಳಗೆ ಮಾತ್ರವಲ್ಲ ಬಿಜೆಪಿ ಮಿತ್ರ ಪಕ್ಷಗಳದ್ದೂ ಅದೇ ಕತೆ. ಕಾಂಗ್ರೆಸ್ಸಿನಿಂದ ಬಿಜೆಪಿಗೆ ಹೋದ ಹರಿಯಾಣದ ಕುಲ್ದೀಪ್ ಬಿಶ್ಣೋಯಿ ಮಾಜಿ ಮುಖ್ಯಮಂತ್ರಿ ಭಜನ್ ಲಾಲ್ ಮಗ. ಸೊಸೆ ರೇಣುಕಾ ಬಿಶ್ಣೋಯಿಯೂ ಬಿಜೆಪಿ ಸೇರಿದ್ದಾರೆ. ಅವರ ಮಗ ಭವ್ಯ ಸಹ ಸೀಟು ಕೇಳಿದ್ದಾರೆ.

ಕೇಂದ್ರ ಮಂತ್ರಿ ರಾಜನಾಥ ಸಿಂಗ್ ಅವರ ಮಗ ನೋಯ್ಡಾದ ಶಾಸಕ ಮತ್ತು ಉಪ್ರ ಬಿಜೆಪಿ ಉಪಾಧ್ಯಕ್ಷ. ರಾಜಸ್ತಾನದ ಮಾಜಿ ಮುಖ್ಯಮಂತ್ರಿ ವಸುಂಧರಾ ರಾಜೇ ಮಗ ದುಷ್ಯಂತ ಸಿಂಗ್ ಬಿಜೆಪಿ ಸಂಸದರು. ಇವರು ಮೂಲ ಬಿಜೆಪಿಗರು. ಕಾಂಗ್ರೆಸ್ಸಿನಲ್ಲಿದ್ದ ಇವರ ಸಂಬಂಧಿ ಸಿಂಧ್ಯಾ ಈಗ ಮಧ್ಯ ಪ್ರದೇಶದಲ್ಲಿ ಬಿಜೆಪಿ ಮಂತ್ರಿ. 

ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಿಂದೆ ಮುಖ್ಯಮಂತ್ರಿಯಾಗಿದ್ದ ಎಸ್. ಆರ್. ಬೊಮ್ಮಾಯಿ ಮಗ. ಪಂಜಾಬಿನ ಮಾಜಿ ಮಂತ್ರಿ ಸುನಿಲ್ ಜಾಕಡ್, ಗೃಹ ರಾಜ್ಯ ಮಂತ್ರಿ ಆರ್. ಪಿ. ಎನ್. ಸಿಂಗ್ ಎಲ್ಲರೂ ವಂಶಾಡಳಿತದ ಕುಡಿಗಳೇ.

ಜೆಡಿಎಸ್ ನ ದೇವೇಗೌಡರು, ಕುಮಾರಸ್ವಾಮಿ, ರೇವಣ್ಣ ಇವರದ್ದು ಭಾರೀ ವಂಶಾಡಳಿತ.

ಇಂದಿರಾ ಗಾಂಧಿ ಸಂಪುಟದಲ್ಲಿದ್ದ ಚಂದ್ರ ಪ್ರತಾಪ್ ನಾರಾಯಣ ಸಿಂಗ್ ಮಗ ಈಗ ಬಿಜೆಪಿ ಶಾಸಕ.  ಈ ಪಟ್ಟಿ ದೊಡ್ಡದು. ಮೋದಿಯವರಿಗೆ ವಂಶಾಡಳಿತ ಹಿಡಿಸದಾದರೆ ಇದಕ್ಕೆಲ್ಲ ಅವಕಾಶ ಕೊಟ್ಟುದು ಯಾಕೆ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಧರ್ಮೇಂದ್ರ ಪ್ರಧಾನ್, ಕಿರಣ್ ರಿಜಿಜು, ಜ್ಯೋತಿರಾದಿತ್ಯ ಸಿಂಧ್ಯಾ ಎಲ್ಲ ವಂಶಾಡಲಿತದ ಕುಡಿಗಳೇ ಆಗಿದ್ದಾರೆ.

ಪಶ್ಚಿಮ ಬಂಗಾಳ ಚುನಾವಣೆಗೆ ಮೊದಲು ಮೋದಿಯವರೇ ಸಿಸಿರ್ ಅಧಿಕಾರಿ, ಸುವೇಂದು ಅಧಿಕಾರಿಗಳನ್ನು ಬರಮಾಡಿಕೊಂಡರು. ಸುವೇಂಧು ಪ್ರತಿ ಪಕ್ಷ ನಾಯಕರು.

ಕಾಂಗ್ರೆಸ್ಸಿನ ಜಿತೇಂದ್ರ ಪ್ರಸಾದರ ಮಗ ಜಿತಿನ್ ಪ್ರಸಾದ್ ಈಗ ಯೋಗಿ ಸಂಪುಟದಲ್ಲಿ ಮಂತ್ರಿ. ಗಂಗಾಧರ ಪಂತ್ ಫಡ್ನವೀಸ್ ಮಗ ದೇವೇಂದ್ರ ಫಡ್ನವೀಸ್, ಅತ್ತೆ ಶೋಭಾ ಫಡ್ನವೀಸ್ ಸಹ ಈಗ ಸಚಿವರಾಗಿದ್ದಾರೆ.

ಎಲ್ಲ ರಾಜ್ಯಗಳಲ್ಲೂ ಬಿಜೆಪಿ ದೊಡ್ಡ ವಂಶಾಡಳಿತ ನಾಯಕರನ್ನು ಹೊಂದಿದೆ. ಕರ್ನಾಟಕದಲ್ಲಿ ಯಡಿಯೂರಪ್ಪ ಕುಟುಂಬ. ರಾಜಕೀಯ ಮತ್ತು ಎಲ್ಲೆಡೆ ವಂಶಾಡಳಿತ ಕಂಡು ಬರುತ್ತಿದೆ. ಬಿಜೆಪಿ ಮಿತ್ರ ಪಕ್ಷಗಳ ಕತೆ ಬೇರೆ ಅಲ್ಲ.

ಹರಿಯಾಣದ ಬಿಜೆಪಿ ಉಪಮುಖ್ಯಮಂತ್ರಿ ದುಷ್ಯಂತ್ ಚೌತಾಲ್ ನಾಲ್ಕನೆಯ ತಲೆಮಾರಿನ ರಾಜಕಾರಣಿ. ದೇವಿಲಾಲ್ ಕುಟುಂಬದವವರು.

ಉ.ಪ್ರ. ಬಿಜೆಪಿಯ ಅನುಪ್ರಿಯ ಪಟೇಲ್ ಅಪ್ನಾ ದಳ ಸ್ಥಾಪಕ ಸೋನೇ ಲಾಲ್ ಪಟೇಲರ ಮಗಳು. ಕೇಂದ್ರದಲ್ಲಿ ಮಂತ್ರಿಯಾಗಿದ್ದ ರಾಮ್ ವಿಲಾಸ್ ಪಾಸ್ವಾನ್ ಅವರ ಮಗ ಚಿರಾಗ್ ಸದ್ಯ ಎನ್’ಡಿಎಯಿಂದ ಹೊರಕ್ಕೆ ಹೋಗಿದ್ದಾರೆ. ಅವರ ಮಾವ ಪಶುಪತಿ ಪಾರಸ್ ನಿತೀಶ್ ಕುಮಾರ್ ಸಂಪುಟದಲ್ಲಿ ಮಂತ್ರಿ.

ಶಿರೋಮಣಿ ಅಕಾಲಿ ದಳ, ಎಸ್’ಪಿ. ಆರ್’ಜೆಡಿ, ಶಿವಸೇನೆ, ಟಿಡಿಪಿ ಎಲ್ಲವೂ ಅದೇ. ಕೆಲವರ ಜೊತೆ ಮೋದಿಯವರು ಮೈತ್ರಿ ಸಾಧಿಸಿದ್ದರು.

ಕಾಂಗ್ರೆಸ್ ಸೋನಿಯಾ ಕುಟುಂಬವನ್ನು ಮಾತ್ರ ಮೋದಿಯವರು ಬೊಟ್ಟು ಮಾಡಿ ಸಾಧಿಸುವುದು ಏನೂ ಇಲ್ಲ. ಕರುಣಾನಿಧಿ ಕುಟುಂಬ, ವೈಎಸ್’ಆರ್ ಕುಟುಂಬ. ಪ್ರತಿ ಪಕ್ಷಗಳಲ್ಲೂ ಇದೆ. ಕಮ್ಯೂನಿಸ್ಟರಲ್ಲೂ ಉಂಟು. ಗುಜರಾತ್ ಚುನಾವಣಾ ಪ್ರಚಾರದಲ್ಲಿ ವಂಶಾಡಳಿತದ ಬಗ್ಗೆ ಮೋದಿಯವರ ಮಾತು ಕೇವಲ ನಾಟಕ ಎಂದು ಪ್ರತಿಪಕ್ಷದವರು ಟೀಕಿಸಿದ್ದಾರೆ.

Join Whatsapp
Exit mobile version