ಗುಜರಾತ್ : ಮಾದಕ ವಸ್ತುಗಳ ವಿರುದ್ಧ ಕಾರ್ಯಾಚರಣೆ ಮುಂದುವರಿಸಿರುವ ಗುಜರಾತ್ ಪೊಲೀಸರು ಸುಮಾರು 600 ಕೋಟಿ ಮೌಲ್ಯದ 120 ಕೆಜಿ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ.
ಮೋರ್ಬಿಯ ಜಿಂಜುಡಾ ಗ್ರಾಮದಲ್ಲಿ ದಾಳಿ ಕೈಗೊಂಡು 600 ಕೋಟಿ ಮೌಲ್ಯದ 120 ಕೆಜಿ ಡ್ರಗ್ಸ್ ವಶಪಡಿಸಿಕೊಂಡು ನಾಲ್ವರು ಡ್ರಗ್ಸ್ ಪೆಡ್ಲರ್ ಗಳನ್ನು ಬಂಧಿಸಿದ್ದಾರೆ.
ಎಟಿಎಸ್ ಹಾಗೂ ಮೊರ್ಬಿ ಪೊಲೀಸರು ನಿನ್ನೆ ತಡರಾತ್ರಿ ಜಿಂಜುಡಾ ಗ್ರಾಮದ ಮೇಲೆ ದಾಳಿ ನಡೆಸಿ ನಾಲ್ವರು ಸೇರಿ 600 ಕೋಟಿ ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡಿದ್ದಾರೆ. ಮೊರ್ಬಿಯಿಂದ 35 ಕಿಮೀ ದೂರದಲ್ಲಿರುವ ಕಡಲತೀರದ ಗ್ರಾಮವಾದ ಜಿಂಜುಡಾದಲ್ಲಿ ಈ ಕಾರ್ಯಾಚರಣೆ ಜರುಗಿದೆ.
ಕಾರ್ಯಾಚರಣೆಯಲ್ಲಿ ಜಿಂಜುಡಾ ಗ್ರಾಮದ ಹಲವು ಮನೆಗಳಲ್ಲಿ ಶೋಧ ನಡೆಸಲಾಗಿದ್ದು, ಕೋಟ್ಯಂತರ ರೂಪಾಯಿ ಮೌಲ್ಯದ ಡ್ರಗ್ಸ್ ಪತ್ತೆಯಾಗಿದೆ. ರಾಜ್ಯ ಗೃಹ ಸಚಿವ ಹರ್ಷ ಸಾಂಘ್ವಿ ಟ್ವೀಟ್ ಮಾಡುವ ಮೂಲಕ ಗುಜರಾತ್ ಎಟಿಎಸ್ ಅನ್ನು ಅಭಿನಂದಿಸಿದ್ದಾರೆ.
ಒಂದು ವಾರದಲ್ಲಿ ಎರಡನೇ ಬಾರಿಗೆ ರಾಜ್ಯದಲ್ಲಿ ಕೋಟ್ಯಂತರ ಮೌಲ್ಯದ ಡ್ರಗ್ಸ್ ವಶಪಡಿಸಿಕೊಳ್ಳಲಾಗಿದೆ. ಐದು ದಿನಗಳ ಹಿಂದೆ ದೇವಭೂಮಿ ದ್ವಾರಕಾದ ಖಂಭಾಲಿಯಾ ಆರಾಧನಾ ಧಾಮ್ ಬಳಿ ಕಾರಿನಲ್ಲಿ ಅಂದಾಜು 66 ಕೆಜಿ ಡ್ರಗ್ಸ್ ವಶಪಡಿಸಿಕೊಳ್ಳಲಾಗಿತ್ತು. ಇವರ ಬೆಲೆ 350 ಕೋಟಿಗೂ ಹೆಚ್ಚು ಎಂದು ಹೇಳಲಾಗುತ್ತಿದೆ.