ಗುಜರಾತ್: ಗುಜರಾತ್ ವಿಧಾನಸಭೆಗೆ ಮೊದಲ ಹಂತದ ಚುನಾವಣೆ ಗುರುವಾರ ಬೆಳಗ್ಗೆ ಆರಂಭವಾಗಿದ್ದು, ಕಾಂಗ್ರೆಸ್ ಶಾಸಕ ಪರೇಶ್ ಧನಾನಿ ಅವರು ಗ್ಯಾಸ್ ಸಿಲಿಂಡರ್ ಅನ್ನು ಸೈಕಲ್ ಹಿಂದೆ ಕಟ್ಟಿಕೊಂಡು ವಿಭಿನ್ನ ರೀತಿಯಲ್ಲಿ ಮತದಾನದ ಹಕ್ಕು ಚಲಾಯಿಸಲು ಮತಗಟ್ಟೆಗೆ ಹೋಗಿದ್ದಾರೆ.
ಪರೇಶ್ ಧನಾನಿ ಗ್ಯಾಸ್ ಸಿಲಿಂಡರ್ ಅನ್ನು ಕಟ್ಟಿಕೊಂಡು ಸೈಕಲ್ ನಲ್ಲಿ ಸವಾರಿ ಮಾಡಿಕೊಂಡು ಬಂದಿದ್ದು, ಅದರ ಮೇಲೆ ಇಂದಿನ ಗ್ಯಾಸ್ ಬೆಲೆಯ ಜೊತೆಗೆ 2014ರ ಗ್ಯಾಸ್ ಬೆಲೆಗೆ ಹೋಲಿಸುವ ಫಲಕ ಅಂಟಿಸಲಾಗಿತ್ತು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರಕಾರದ ವೈಫಲ್ಯದಿಂದ ಗುಜರಾತ್ ನಲ್ಲಿ ಹಣದುಬ್ಬರ ಹಾಗೂ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ. ಅನಿಲ ಮತ್ತು ಇಂಧನ ಬೆಲೆಗಳು ಗಗನಕ್ಕೇರಿವೆ, ಎಂದು ಹೇಳಿದ್ದಾರೆ.
#WATCH | Amreli: Congress MLA Paresh Dhanani leaves his residence, to cast his vote, with a gas cylinder on a bicycle underscoring the issue of high fuel prices.#GujaratAssemblyPolls pic.twitter.com/QxfYf1QgQR
— ANI (@ANI) December 1, 2022