Home ಟಾಪ್ ಸುದ್ದಿಗಳು ಗುಜರಾತ್ ಬಿಜೆಪಿ ಶಾಸಕ ಮಧುಭಾಯಿಗೆ ಟಿಕೆಟ್ ನಿರಾಕರಣೆ: ಬಂಡಾಯ ಅಭ್ಯರ್ಥಿಯಾಗಿ ಕಣಕ್ಕೆ

ಗುಜರಾತ್ ಬಿಜೆಪಿ ಶಾಸಕ ಮಧುಭಾಯಿಗೆ ಟಿಕೆಟ್ ನಿರಾಕರಣೆ: ಬಂಡಾಯ ಅಭ್ಯರ್ಥಿಯಾಗಿ ಕಣಕ್ಕೆ

ಅಹ್ಮದಾಬಾದ್: ವಘೋಡಿಯಾ ಕ್ಷೇತ್ರದಿಂದ ಆರು ಬಾರಿ ಬಿಜೆಪಿ ಶಾಸಕರಾಗಿದ್ದ ಮಧುಭಾಯಿ ಶ್ರೀವಾತ್ಸವರಿಗೆ ಬಿಜೆಪಿ ಟಿಕೆಟ್ ನಿರಾಕರಿಸಿದ್ದು, ಅವರು ಈಗ ಬಂಡಾಯವೆದ್ದು ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದಾರೆ.

ಕಾಂಗ್ರೆಸ್ಸಿನಲ್ಲಿದ್ದ ನಾನು 25 ವರ್ಷಗಳ ಹಿಂದೆ ಮೋದಿ ಮತ್ತು ಶಾ ಕರೆಯ ಮೇರೆಗೆ ಬಿಜೆಪಿಗೆ ಬಂದೆ. ಅಂದಿನಿಂದಲೂ ಬಿಜೆಪಿ ಶಾಸಕನಾಗಿರುವೆ. ನನ್ನ ಕ್ಷೇತ್ರ ನನ್ನನ್ನು ಬಯಸಿದೆ. ಅವರನ್ನು ನಿರಾಶೆಗೊಳಿಸಲಾಗದು ಎಂದು ಮಧುಭಾಯಿ ಹೇಳಿದರು.

ಗುಜರಾತ್ ಗಲಭೆಯಲ್ಲೂ ಆರೋಪಿಯಾಗಿದ್ದ ಮಧುಭಾಯಿ, ಇಲ್ಲಿ ಏನೂ ಇಲ್ಲ. ಈ ಟಿಕೆಟ್ ಎಲ್ಲ ದೆಹಲಿಯವರ ಕರಾಮತ್ತು ಎಂದೂ ಟೀಕಿಸಿದ್ದಾರೆ.

ನಾನು ನೇರ ಮೋದಿ ಇಲ್ಲವೇ ಶಾ ಜೊತೆಗೆ ಮಾತನಾಡಬಲ್ಲೆ. ಆದರೆ ಆರು ಬಾರಿಯ ಶಾಸಕ ಟಿಕೆಟ್ ಗಾಗಿ ಫೋನು ಮಾಡುವುದಿಲ್ಲ ಎಂದು ಮಧುಭಾಯಿ ಹೇಳಿದ್ದಾರೆ.

ಕಾಂಗ್ರೆಸ್ ನಾಯಕರ ಕುಟುಂಬದಿಂದ ಬಂದ ಮಧುಭಾಯಿ 1995ರಲ್ಲಿ ಅಲ್ಲೂ ಬಂಡಾಯವೆದ್ದು ಸ್ವತಂತ್ರವಾಗಿ ಗೆದ್ದಿದ್ದರು. ಮೋದಿ, ಶಾ ಕರೆದರೆಂದು ಬಿಜೆಪಿಗೆ ಬಂದು ಬಿಜೆಪಿಯಿಂದಲೂ ಐದು ಬಾರಿ ಗೆದ್ದಿದ್ದಾರೆ.

ವಡೋದರ ಬಿಜೆಪಿ ಮುಖ್ಯಸ್ಥ ಅಶ್ವಿನಿ ಪಟೇಲ್ ರಿಗೆ ನನ್ನ ಕ್ಷೇತ್ರದ ಬಿಜೆಪಿ ಟಿಕೆಟ್ ನೀಡಲಾಗಿದೆ. ನಾನೀಗ ಸಿಟ್ಟಿಗೆದ್ದಿರುವ ಬಂಡಾಯಗಾರ ಎಂದು ಮಧುಭಾಯಿ ಹೇಳಿದ್ದಾರೆ.

ಬಿಜೆಪಿಯು ಐವರು ಮಂತ್ರಿಗಳ ಸಹಿತ 38 ಮಂದಿ ಹಾಲಿ ಶಾಸಕರಿಗೆ ಟಿಕೆಟ್ ನೀಡಿಲ್ಲ. ಅವರಲ್ಲಿ 15 ಮಂದಿ ಬಂಡಾಯ ಸ್ಪರ್ಧಿಸುವುದು ಖಚಿತ ಎನ್ನಲಾಗಿದೆ.

Join Whatsapp
Exit mobile version