Home ಟಾಪ್ ಸುದ್ದಿಗಳು ದೆಹಲಿ ಪೊಲೀಸರಿಂದ ಗುಜರಾತ್ ಎಎಪಿ ಮುಖ್ಯಸ್ಥನ ಬಂಧನ

ದೆಹಲಿ ಪೊಲೀಸರಿಂದ ಗುಜರಾತ್ ಎಎಪಿ ಮುಖ್ಯಸ್ಥನ ಬಂಧನ

ನವದೆಹಲಿ: ದೆಹಲಿ ಪೊಲೀಸರು ಗುಜರಾತ್ ಎಎಪಿ ಮುಖ್ಯಸ್ಥ ಗೋಪಾಲ್ ಇಟಾಲಿಯಾ ಅವರನ್ನು ಎನ್.ಸಿ.ಡಬ್ಲ್ಯೂ. ಕಚೇರಿಯಿಂದ ಬಂಧಿಸಿದ್ದಾರೆ.

ಪ್ರಧಾನಿ ಮೋದಿ ಅವರ ವಿರುದ್ಧ ಅವಹೇಳನಕಾರಿ ಭಾಷೆ ಬಳಿಸಿದ ವೀಡಿಯೋಗೆ ಸಂಬಂಧಿಸಿದಂತೆ ಎಎಪಿ ಗುಜರಾತ್ ಮುಖ್ಯಸ್ಥ ಗೋಪಾಲ್ ಇಟಾಲಿಯಾ ಅವರಿಗೆ ಎನ್.ಸಿ.ಡಬ್ಲ್ಯೂ. ಇಂದು ವಿಚಾರಣೆಗೆ ಬರುವಂತೆ ಸಮನ್ಸ್ ನೀಡಿತ್ತು. ಇದೀಗ ಅವರನ್ನು ದೆಹಲಿ ಪೊಲೀಸರು ಅಧಿಕೃತವಾಗಿ ಬಂಧಿಸಿದ್ದಾರೆ.

ಇದನ್ನು ವಿರೋಧಿಸಿ ಎಎಪಿ ಕಾರ್ಯಕರ್ತರು ಎನ್.ಸಿ.ಡಬ್ಲ್ಯೂ. ( ರಾಷ್ಟ್ರೀಯ ಮಹಿಳಾ ಆಯೋಗ) ಅಧ್ಯಕ್ಷೆ ರೇಖಾ ಶರ್ಮಾ ಅವರ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ.

Join Whatsapp
Exit mobile version