Home ಟಾಪ್ ಸುದ್ದಿಗಳು ಗುಜರಾತ್: ದೇವಸ್ಥಾನದಿಂದ ಹಿಂದಿರುಗುವಾಗ ಟ್ರಕ್​ಗೆ ಕಾರು ಡಿಕ್ಕಿ, 7 ಮಂದಿ ಸಾವು

ಗುಜರಾತ್: ದೇವಸ್ಥಾನದಿಂದ ಹಿಂದಿರುಗುವಾಗ ಟ್ರಕ್​ಗೆ ಕಾರು ಡಿಕ್ಕಿ, 7 ಮಂದಿ ಸಾವು

ಸಬರಕಾಂತ: ದೇವಸ್ಥಾನದಿಂದ ಹಿಂದಿರುಗುವಾಗ ಟ್ರಕ್​ಗೆ ಕಾರು ಡಿಕ್ಕಿಯಾಗಿ, 7 ಮಂದಿ ಸಾವನ್ನಪ್ಪಿರುವ ಘಟನೆ ಗುಜರಾತ್‌ನ ಸಬರಕಾಂತ ಜಿಲ್ಲೆಯಲ್ಲಿ ನಡೆದಿದೆ.

ಕಾರಿನಲ್ಲಿ ಎಂಟು ಜನರು ಕುಳಿತಿದ್ದರು, ಅವರೆಲ್ಲರೂ ಅರಾವಳಿ ಜಿಲ್ಲೆಯಲ್ಲಿರುವ ಶಾಮಲಾಜಿ ದೇವಸ್ಥಾನಕ್ಕೆ ಭೇಟಿ ನೀಡಿ ಅಹಮದಾಬಾದ್‌ಗೆ ಹಿಂತಿರುಗುತ್ತಿದ್ದರು. ಕಾರು ಹಿಮ್ಮತ್‌ನಗರ ಪ್ರದೇಶದ ಸಹಕಾರಿ ಗಿರಣಿ ಬಳಿ ಬಂದ ತಕ್ಷಣ ಟ್ರಕ್‌ಗೆ ಡಿಕ್ಕಿ ಹೊಡೆದಿದೆ ಎಂದು ಹೇಳಲಾಗಿದೆ.

ಅಗ್ನಿಶಾಮಕ ದಳದ ಸಿಬ್ಬಂದಿಯೊಂದಿಗೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದರು. ಅಗ್ನಿಶಾಮಕ ದಳದವರು ಕಾರಿನಿಂದ ಶವಗಳನ್ನು ತೆಗೆಯಲು ಕಟ್ಟರ್ ಬಳಸಬೇಕಾಯಿತು.ಈ ಅಪಘಾತದಲ್ಲಿ ಪ್ರಾಣ ಕಳೆದುಕೊಂಡವರೆಲ್ಲರೂ ಅಹಮದಾಬಾದ್ ನಿವಾಸಿಗಳು ಎಂದು ತಿಳಿದು ಬಂದಿದೆ.

Join Whatsapp
Exit mobile version