Home ಟಾಪ್ ಸುದ್ದಿಗಳು ಗುಜರಾತ್ | ಬಸ್’ಗೆ ಲಾರಿ ಡಿಕ್ಕಿ: 6 ಮಂದಿ ಸಾವು

ಗುಜರಾತ್ | ಬಸ್’ಗೆ ಲಾರಿ ಡಿಕ್ಕಿ: 6 ಮಂದಿ ಸಾವು

ಅಹಮದಾಬಾದ್: ಬಸ್’ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ 6 ಮಂದಿ ಪ್ರಾಣ ಮೃತಪಟ್ಟಿರುವ ಘಟನೆ ಗುಜರಾತ್ ನ ವಡೋದರಾ ಎಕ್ಸ್ಪ್ರೆಸ್ ಹೆದ್ದಾರಿಯಲ್ಲಿ ಸಂಭವಿಸಿದೆ.


ಜುಲೈ 15 ರಂದು ಬೆಳಿಗ್ಗೆ 4.30 ರ ಸುಮಾರಿಗೆ ಐಷಾರಾಮಿ ಬಸ್’ಗೆ ಲಾರಿ ಡಿಕ್ಕಿ ಹೊಡೆದಿದೆ. 3 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನೂ ಮೂವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಬಸ್ ಮಹಾರಾಷ್ಟ್ರದಿಂದ ರಾಜಸ್ಥಾನಕ್ಕೆ ಹೋಗುತ್ತಿತ್ತು. ಆನಂದ್ ಬಳಿ ಬಸ್ ಪಂಕ್ಚರ್ ಆಗಿತ್ತು. ಇದರಿಂದಾಗಿ ಬಸ್ಸಿನ ಚಾಲಕ ಹಾಗೂ ಪ್ರಯಾಣಿಕರು ಬಸ್ಸಿನ ಕೆಳಗೆ ನಿಂತಿದ್ದರು. ಆಗ ಹಿಂದಿನಿಂದ ಲಾರಿಯೊಂದು ಬಸ್ ಗೆ ಡಿಕ್ಕಿ ಹೊಡೆದಿದೆ. ರಸ್ತೆ ಅಪಘಾತದ ಸುದ್ದಿ ತಿಳಿದ ತಕ್ಷಣ ಆನಂದ ಅಗ್ನಿಶಾಮಕ ದಳ, ಎಕ್ಸ್ ಪ್ರೆಸ್ ಹೈವೇ ಪೆಟ್ರೋಲಿಂಗ್ ತಂಡ ಮತ್ತು ಆನಂದ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಧಾವಿಸಿದರು.

Join Whatsapp
Exit mobile version