Home ಟಾಪ್ ಸುದ್ದಿಗಳು ಅತಿ ಉದ್ದ ಕೂದಲು ಬೆಳೆಸಿ ಗಿನ್ನಿಸ್ ದಾಖಲೆ ಬರೆದ ಹುಡುಗ

ಅತಿ ಉದ್ದ ಕೂದಲು ಬೆಳೆಸಿ ಗಿನ್ನಿಸ್ ದಾಖಲೆ ಬರೆದ ಹುಡುಗ

ನೋಯ್ಡಾ: ಅತಿ ಉದ್ದನೆಯ ಕೂದಲು ಬೆಳೆಸುವ ಮೂಲಕ ಉತ್ತರ ಪ್ರದೇಶ ಮೂಲದ ಸಿದ್ದಕ್ ದೀಪ್ ಸಿಂಗ್ ಚಹಲ್ ಗಿನ್ನಿಸ್ ದಾಖಲೆ ಬರೆದಿದ್ದಾನೆ. ಇವರ ಸಾಧನೆಯ ವಿಡಿಯೋವನ್ನು ‘ಗಿನ್ನಿಸ್ ವರ್ಲ್ಡ್ ರೆಕಾರ್ಡ್’ ಸಂಸ್ಥೆ ಸಾಮಾಜಿಕ ಮಾಧ್ಯಮ ಎಕ್ಸ್ನಲ್ಲಿ ಹಂಚಿಕೊಂಡಿದೆ. ಸುಮಾರು 4 ಅಡಿ 9.5 ಇಂಚು ಉದ್ದ ಕೂದಲು ಬೆಳೆದಿದ್ದು, ಸಿದ್ದಕ್ ದೀಪ್ ಸಿಂಗ್ ಕೇಶವನ್ನು ಸುಂದರವಾಗಿ ಕಾಪಾಡಿಕೊಂಡು ಬಂದಿದ್ದಾರೆ.


ಈ ಬಗ್ಗೆ ಮಾತನಾಡಿದ ಸಿದ್ದಕ್ದೀಪ್ ಸಿಂಗ್, “ಜನರು ನನ್ನ ಕೂದಲನ್ನು ನೋಡಿ ತುಂಬಾ ಉದ್ದ ಹಾಗೂ ದಟ್ಟವಾಗಿದೆ ಎಂದು ಹೇಳುತ್ತಾರೆ. ಹಲವರು ನನ್ನ ಬಳಿ ಬಂದು ನಮಗೆ ಈ ರೀತಿಯ ಕೂದಲು ಬೆಳೆಯಬೇಕಿತ್ತು ಎಂದು ಆಸೆ ವ್ಯಕ್ತಪಡಿಸುತ್ತಾರೆ. ನನ್ನ ಕೂದಲು ಸುಮಾರು 130 ಸೆಂ.ಮೀ ಅಥವಾ 4 ಅಡಿ ಉದ್ದ ಇರಬಹುದು” ಎಂದರು.

Join Whatsapp
Exit mobile version