ಬೆಂಗಳೂರು: ಗೃಹಲಕ್ಷ್ಮೀ ಯೋಜನೆಗೆ ಸಂಬಂಧಿಸಿದಂತೆ ರಾಜ್ಯ ಕಾಂಗ್ರೆಸ್ ಸರ್ಕಾರ ಮಂಗಳವಾರ ಮಾರ್ಗಸೂಚಿ ಪ್ರಕಟಿಸಿದೆ.
ಬಿಪಿಎಲ್, ಎಪಿಎಲ್ ಕಾರ್ಡ್ನಲ್ಲಿ ಕುಟುಂಬದ ಯಜಮಾನಿ ಎಂದು ನಮೂದು ಕಡ್ಡಾಯವಾಗಿದ್ದು, ನಮೂದಿಸಿರುವ ಮಹಿಳೆ ಯೋಜನೆಯ ಅರ್ಹ ಫಲಾನುಭವಿಗಳಾಗಲಿದ್ದಾರೆ.
ಗೃಹ ಲಕ್ಷ್ಮೀ ಯೋಜನೆಗೆ ಯಾರೆಲ್ಲ ಅರ್ಹರು?
ಒಂದು ಕುಟುಂಬದಲ್ಲಿ ಒಂದಕ್ಕಿಂತ ಹೆಚ್ಚು ಮಹಿಳೆಯರಿದ್ದರೆ ಒಂದೇ ಮಹಿಳೆಗೆ ಯೋಜನೆ ಅನ್ವಯವಾಗಲಿದೆ. ಕುಟುಂಬದ ಯಜಮಾನಿಯ ಪತಿ ಆದಾಯ ತೆರಿಗೆ ಪಾವತಿಸುತ್ತಿದ್ದರೆ ಗೃಹ ಲಕ್ಷ್ಮಿ ಅರ್ಹತೆ ಇಲ್ಲ. ಯಜಮಾನಿ ಅಥವಾ ಮಹಿಳೆಯ ಯಜಮಾನ ಜಿಎಸ್ಟಿ ಪಾವತಿದಾರರಾಗಿದ್ದರೆ ಯೋಜನೆ ಲಭ್ಯವಿಲ್ಲ. ಜೂ.15ರಿಂದ ಜು.15ರವರೆಗೆ ಸೇವಾಸಿಂಧು ಪೋರ್ಟಲ್ನಲ್ಲಿ ಅರ್ಜಿ ಸಲ್ಲಿಸಬೇಕು. ಗೃಹ ಲಕ್ಷ್ಮೀ ಯೋಜನೆಗೆ ಭೌತಿಕವಾಗಿಯೂ ಅರ್ಜಿ ಸಲ್ಲಿಸಲು ಅವಕಾಶವಿದೆ.
ಯೋಜನೆ ಲಾಭ ಪಡೆಯಲು ಬ್ಯಾಂಕ್ ಖಾತೆ, ಆಧಾರ್ ಜೋಡಣೆ ಕಡ್ಡಾಯವಾಗಿದೆ. ತಪ್ಪು ಮಾಹಿತಿ ನೀಡಿದರೆ ಗೃಹ ಲಕ್ಷ್ಮೀ ಯೋಜನೆಯಡಿ ನೀಡಿರುವ ಹಣ ವಸೂಲಿ ಮಾಡುವುದಾಗಿ ಸರ್ಕಾರ ಎಚ್ಚರಿಕೆ ನೀಡಿದೆ.
ಗೃಹ ಲಕ್ಷ್ಮೀ ಯೋಜನೆ ಮುಖ್ಯಾಂಶಗಳು
► ಜೂನ್ 15ರಿಂದ ಜುಲೈ 15ರ ಒಳಗೆ ಅರ್ಜಿ ನೀಡಬೇಕು.
► ಆನ್ಲೈನ್ ಮೂಲಕ ಅರ್ಜಿಗಳನ್ನು ತಲುಪಿಸಬೇಕು.
► ಜುಲೈ 15ರಿಂದ ಆಗಸ್ಟ್ 15 ರ ಒಳಗೆ ಅರ್ಜಿಗಳನ್ನು ಪರಿಶೀಲಿಸಿ ಆಗಸ್ಟ್ 15ರಂದು ಯೋಜನೆ ಜಾರಿಗೊಳಿಸುತ್ತೇವೆ.
► ಅರ್ಜಿಯಲ್ಲಿ ಕೊಟ್ಟ ಮಾಹಿತಿಯ ಆಧಾರದಲ್ಲಿ ಯೋಜನೆ ಜಾರಿಗೊಳಿಸಲಾಗುವುದು.
► ಪರಿಶೀಲನೆ ಪ್ರಕ್ರಿಯೆಗೆ ಸಮಯ ತೆಗೆದುಕೊಳ್ಳುವುದರಿಂದ ಈ ತಿಂಗಳಿನಿಂದಲೇ ಜಾರಿಗೆ ತರಲಾಗದು.