Home ಟಾಪ್ ಸುದ್ದಿಗಳು ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳು ನಿಲ್ಲುವುದಿಲ್ಲ: ಡಿಕೆ ಶಿವಕುಮಾರ್

ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳು ನಿಲ್ಲುವುದಿಲ್ಲ: ಡಿಕೆ ಶಿವಕುಮಾರ್

ಶಿವಮೊಗ್ಗ: ಕಾಂಗ್ರೆಸ್ ಸರ್ಕಾರ ಬಲಿಷ್ಠವಾಗಿದ್ದು, ಯಾವುದೇ ಕಾರಣಕ್ಕೂ ಗ್ಯಾರಂಟಿ ಯೋಜನೆಗಳು ನಿಲ್ಲುವುದಿಲ್ಲ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿದರು.


ಶಿವಮೊಗ್ಗದಲ್ಲಿ ಮಾತನಾಡಿದ ಅವರು, ‘ದೇವಸ್ಥಾನಗಳು ಯಾರ ಆಸ್ತಿಯೂ ಅಲ್ಲ, ರಾಮ ಮಂದಿರ ಪೂಜೆಗೆ ಅವಕಾಶ ನೀಡಿದ್ದೇ ರಾಜೀವ್ ಗಾಂಧಿಯವರು. ಧರ್ಮದ ವಿಚಾರದಲ್ಲಿ ಯಾರೂ ರಾಜಕಾರಣ ಮಾಡಬಾರದು. ಗ್ಯಾರಂಟಿ ಯೋಜನೆ ನೀಡಿದ್ದು ಜಾತಿ ಮೇಲೆ ಅಲ್ಲ, ನೀತಿ ಮೇಲೆ. ಹೆಚ್ಚುವರಿ 5 ಕೆಜಿ ಅಕ್ಕಿ ಕೇಳಿದ್ದಕ್ಕೆ ಕೇಂದ್ರ ಸರ್ಕಾರ ನೀಡಿಲ್ಲ. ಆದರೂ, ನಾವು ಹೆಚ್ಚುವರಿ 5 ಕೆಜಿ ಅಕ್ಕಿ ಬದಲಿಗೆ ಹಣ ನೀಡಿದ್ದೇವೆ. ದರಿದ್ರ ಲಕ್ಷ್ಮೀ ಹೋಗಿ, ಈಗ ಗೃಹಲಕ್ಷ್ಮೀ ಯೋಜನೆ ಜಾರಿ ಆಗಿದೆ ಎಂದರು.


ಮಲೆನಾಡು ದೊಡ್ಡ ಇತಿಹಾಸ ಹೊಂದಿರುವ ಜಿಲ್ಲೆ ಆಗಿದೆ. ನಾನು ಮಾಜಿ ಸಿಎಂ ಬಂಗಾರಪ್ಪ ಅವರ ಶಿಷ್ಯ ಆಗಿರುವೆ. ಇನ್ನೂ ಎರಡು ಕ್ಷೇತ್ರ ಶಿವಮೊಗ್ಗದಲ್ಲಿ ಮಿಸ್ ಆಗಿದೆ. ವಿಧಾನಸಭೆ ಚುನಾವಣೆಯಲ್ಲಿ 141 ಕ್ಷೇತ್ರ ನನ್ನ ಗುರಿ ಇತ್ತು. ಕಾಂಗ್ರೆಸ್ ಸರಕಾರ ಬಲಿಷ್ಠ ಆಗಿದೆ. ಗ್ಯಾರಂಟಿಗಳು ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ ಎಂದರು.

Join Whatsapp
Exit mobile version