Home Uncategorized ಗೃಹಲಕ್ಷ್ಮೀ ಯೋಜನೆ: ಈವರೆಗೆ 1.11 ಕೋಟಿ ಮಹಿಳೆಯರಿಂದ ನೋಂದಣಿ

ಗೃಹಲಕ್ಷ್ಮೀ ಯೋಜನೆ: ಈವರೆಗೆ 1.11 ಕೋಟಿ ಮಹಿಳೆಯರಿಂದ ನೋಂದಣಿ

ಮೈಸೂರು: ಕಾಂಗ್ರೆಸ್ ಸರ್ಕಾರದ 5 ಗ್ಯಾರಂಟಿಗಳಲ್ಲಿ ಒಂದಾದ ‘ಗೃಹಲಕ್ಷ್ಮೀ’ಗೆ ಈವರೆಗೆ 1.11 ಕೋಟಿ ಮಹಿಳೆಯರು ನೋಂದಣಿ ಮಾಡಿಕೊಂಡಿದ್ದಾರೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮಾಹಿತಿ ನೀಡಿದ್ದಾರೆ.

ಗೃಹಲಕ್ಷ್ಮೀ ಯೋಜನೆಗೆ ನೋಂದಣಿ ಮಾಡಲು ಕೊನೆ ದಿನಾಂಕ ಇಲ್ಲ. ಜನರು ಮತ್ತೆ ಆಶೀರ್ವಾದ ನೀಡಿದರೆ ಯೋಜನೆ ನಿರಂತರವಾಗಿ ಜಾರಿಯಾಗುತ್ತೆ. ಯಾವ ಸರ್ಕಾರ ಬಂದರೂ ಇಂತಹ ಜನಪ್ರಿಯ ಯೋಜನೆ ನಿಲ್ಲಲ್ಲ. 5 ಗ್ಯಾರಂಟಿಗಳಲ್ಲೇ ಗೃಹಲಕ್ಷ್ಮೀ ಯೋಜನೆ ಬಹಳಷ್ಟು ಸದ್ದು ಮಾಡ್ತಿದೆ ಎಂದರು.

Join Whatsapp
Exit mobile version