Home ಟಾಪ್ ಸುದ್ದಿಗಳು ನಮೀಬಿಯಾದಿಂದ ತಂದ ಚೀತಾಗಳಿಗೆ ಕ್ವಾರಂಟೈನ್ ನಿಂದ ಮುಕ್ತಿ: ‘ಗ್ರೇಟ್ ನ್ಯೂಸ್’ ಎಂದು ವೀಡಿಯೋ ಟ್ವೀಟ್ ಮಾಡಿದ...

ನಮೀಬಿಯಾದಿಂದ ತಂದ ಚೀತಾಗಳಿಗೆ ಕ್ವಾರಂಟೈನ್ ನಿಂದ ಮುಕ್ತಿ: ‘ಗ್ರೇಟ್ ನ್ಯೂಸ್’ ಎಂದು ವೀಡಿಯೋ ಟ್ವೀಟ್ ಮಾಡಿದ ಮೋದಿ

ನವದೆಹಲಿ: ನಮೀಬಿಯಾದಿಂದ ತರಲಾದ ಎರಡು ಚೀತಾಗಳು, ಕ್ವಾರಂಟೈನ್ ಅನ್ನು ಪೂರ್ಣಗೊಳಿಸಿದ್ದು, ಚೀತಾಗಳನ್ನು ಈಗ ಕುನೋ ರಾಷ್ಟ್ರೀಯ ಉದ್ಯಾನವನದ ದೊಡ್ಡ ಆವರಣಕ್ಕೆ ಬಿಡುಗಡೆ ಮಾಡಲಾಗಿದೆ .ಚೀತಾ ಬಿಡುಗಡೆಯಾಗುವ ವೀಡಿಯೋ ಹಂಚಿಕೊಂಡ ಪ್ರಧಾನಿ ನರೇಂದ್ರ ಮೋದಿ ‘ಗ್ರೇಟ್ ನ್ಯೂಸ್’ ಎಂದು ಟ್ವೀಟ್ ಮಾಡಿದ್ದಾರೆ.

ಸೆಪ್ಟೆಂಬರ್ ನಲ್ಲಿ ಮೋದಿ ಜನ್ಮದಿನದಂದು ಬಿಡುಗಡೆ ಮಾಡಿದ ಚೀತಾಗಳ ವೀಡಿಯೊವನ್ನು ಹಂಚಿಕೊಂಡ ಪ್ರಧಾನಿ ಮೋದಿ, ಗ್ರೇಟ್ ನ್ಯೂಸ್! ಕಡ್ಡಾಯ ಕ್ವಾರಂಟೈನ್ ನಂತರ, ಕುನೊ ಉದ್ಯಾನವನಕ್ಕೆ ಮತ್ತಷ್ಟು ಹೊಂದಿಕೊಳ್ಳಲು 2 ಚೀತಾಗಳನ್ನು ದೊಡ್ಡ ಆವರಣಕ್ಕೆ ಬಿಡಲಾಗಿದೆ ಎಂದು ನನಗೆ ತಿಳಿಸಲಾಗಿದೆ. ಉಳಿದವುಗಳನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು. ಎಲ್ಲಾ ಚೀತಾಗಳು ಆರೋಗ್ಯಕರವಾಗಿವೆ, ಸಕ್ರಿಯವಾಗಿವೆ ಮತ್ತು ಉತ್ತಮವಾಗಿ ಹೊಂದಿಕೊಳ್ಳುತ್ತವೆ ಎಂದು ತಿಳಿದು ಬಂದಿದ್ದು, ನನಗೆ ಸಂತೋಷವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

ಸಪ್ಟೆಂಬರ್ ನಲ್ಲಿ ನಮೀಬಿಯಾದ ತರಲಾದ ಈ ಎರಡು ಚೀತಾಗಳನ್ನು ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ ಕ್ವಾರಂಟೈನ್ ನಲ್ಲಿ ಇಡಲಾಗಿತ್ತು. 50 ದಿವಸಗಳ ಕ್ವಾರಂಟೈನ್ ಪೂರ್ಣಗೊಳಿಸಿದ ನಂತರ ಚೀತಾಗಳನ್ನು ಈಗ ರಾಷ್ಟ್ರೀಯ ಉದ್ಯಾನವನದ ದೊಡ್ಡ ಆವರಣಕ್ಕೆ ಬಿಡಲಾಗಿದೆ.

Join Whatsapp
Exit mobile version