ದುಬೈ : ICC T-20 ವಿಶ್ವಕಪ್ 2021ರ ‘ಶ್ರೇಷ್ಠ-11’ ತಂಡವನ್ನು ಅಂತರಾಷ್ಟ್ರೀಯ ಕ್ರಿಕೆಟ್ ಸಮಿತಿ ಪ್ರಕಟಿಸಿದೆ. ಪಾಕಿಸ್ತಾನದ ಕ್ಯಾಪ್ಟನ್ ಬಾಬಾರ್ ಅಝಂ ICC ಪ್ರಕಟಿಸಿದ ತಂಡದ ನಾಯಕನಾಗಿದ್ದು, ಟೀಮ್ ಇಂಡಿಯಾದ ಯಾವುದೇ ಆಟಗಾರರು ತಂಡದಲ್ಲಿ ಸ್ಥಾನ ಪಡೆದಿಲ್ಲ. ಪಾಕಿಸ್ತಾನದ ಬೌಲರ್ ಶಾಹಿನ್ ಅಫ್ರೀದಿ 12ನೇ ಆಟಗಾರನಾಗಿ ಆಯ್ಕೆಯಾಗಿದ್ದಾರೆ.
ICC T-20 ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಕಾಣದೆ ಹೊರನಡೆದಿದ್ದ ಶ್ರೀಲಂಕಾ, ದಕ್ಷಿಣ ಆಫ್ರಿಕಾ ಸೇರಿದಂತೆ ಆರು ರಾಷ್ಟ್ರಗಳ ಆಟಗಾರರು ICC T-20 ವಿಶ್ವಕಪ್ 2021ರ ‘ಶ್ರೇಷ್ಠ-11’ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ದಕ್ಷಿಣ ಆಫ್ರಿಕಾದ ಏಡನ್ ಮಾರ್ಕಮ್, ಎನ್ರಿಚ್ ನೊರ್ಕಿಯಾ, ಶ್ರೀಲಂಕಾದ ಚರಿತ್ ಅಸಲಂಕ ವಾನಿಂದು ಹಸರಂಗ ICC ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ICC T-20 ವಿಶ್ವಕಪ್ 2021ರ ‘ಶ್ರೇಷ್ಠ-11 ’ ತಂಡ
ಡೇವಿಡ್ ವಾರ್ನರ್ (ಆಸ್ಟ್ರೇಲಿಯಾ)
ಜೋಸ್ ಬಟ್ಲರ್ WK (ಇಂಗ್ಲೆಂಡ್)
ಬಾಬರ್ ಅಝಂ C (ಪಾಕಿಸ್ತಾನ)
ಚರಿತ್ ಅಸಲಂಕ (ಶ್ರೀಲಂಕಾ)
ಏಡನ್ ಮಾರ್ಕಮ್ (ದಕ್ಷಿಣ ಆಫ್ರಿಕಾ)
ಮೊಯಿನ್ ಅಲಿ (ಇಂಗ್ಲೆಂಡ್)
ವಾನಿಂದು ಹಸರಂಗ (ಶ್ರೀಲಂಕಾ)
ಆ್ಯಡಂ ಝಂಪಾ (ಆಸ್ಟ್ರೇಲಿಯಾ)
ಜೋಶ್ ಹ್ಯಾಝಲ್’ವುಡ್ (ಆಸ್ಟ್ರೇಲಿಯಾ)
ಟ್ರೆಂಟ್ ಬೌಲ್ಟ್ (ನ್ಯೂಜಿಲೆಂಡ್)
ಎನ್ರಿಚ್ ನೊರ್ಕಿಯಾ (ದಕ್ಷಿಣ ಆಫ್ರಿಕಾ)
ಶಾಹಿನ್ ಅಫ್ರೀದಿ, 12ನೇ ಆಟಗಾರ (ಪಾಕಿಸ್ತಾನ)
ತಂಡದ ಆಯ್ಕೆ ಕುರಿತು ಪ್ರತಿಕ್ರಿಯಿಸಿರುವ ಆಯ್ಕೆ ಸಮಿತಿ ಸದಸ್ಯ ವೆಸ್ಟ್ ಇಂಡೀಸ್’ನ ಇಯಾನ್ ಬಿಷಪ್, ಸಾಕಷ್ಟು ಚರ್ಚೆ ಹಾಗೂ ಅನುಭವಿಗಳ ಅಭಿಪ್ರಾಯವನ್ನು ಪಡೆದು ICC T-20 ವಿಶ್ವಕಪ್ 2021ರ ‘ಶ್ರೇಷ್ಠ-11’ ತಂಡವನ್ನು ಪ್ರಕಟಿಸಲಾಗಿದೆ. ಸೂಪರ್-12 ಹಂತ ಮತ್ತು ನಂತರದ ಪಂದ್ಯಗಳಲ್ಲಿ ಆಟಗಾರರು ತೋರಿರುವ ಪ್ರದರ್ಶನದ ಆಧಾರದಲ್ಲಿ ಆಯ್ಕೆ ಮಾಡಲಾಗಿದ್ದು, ಇದೊಂದು ಭಾರಿ ಸವಾಲಿನ ಕೆಲಸವಾಗಿತ್ತು ಎಂದು ಇಯಾನ್ ಬಿಷಪ್ ಹೇಳಿದ್ದಾರೆ.