Home ಕರಾವಳಿ ಜೋಡುಪಾಲದಲ್ಲಿ ಗ್ರಾನೈಟ್ ತುಂಬಿದ್ದ ಲಾರಿ ಪಲ್ಟಿ | ಲಕ್ಷಾಂತರ ರೂಪಾಯಿ ನಷ್ಟ!

ಜೋಡುಪಾಲದಲ್ಲಿ ಗ್ರಾನೈಟ್ ತುಂಬಿದ್ದ ಲಾರಿ ಪಲ್ಟಿ | ಲಕ್ಷಾಂತರ ರೂಪಾಯಿ ನಷ್ಟ!

ಜೋಡುಪಾಲ : ಮೈಸೂರಿನಿಂದ ಪುತ್ತೂರಿಗೆ ಗ್ರಾನೈಟ್ ತುಂಬಿಕೊಂಡು ಹೋಗುತ್ತಿದ್ದ ಲಾರಿಯೊಂದು ಮಡಿಕೇರಿ ಸಮೀಪದ ಜೋಡುಪಾಲದಲ್ಲಿ ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗಿದೆ. ಲಾರಿಯಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಗ್ರಾನೈಟ್ ಗಳು ರಸ್ತೆಗೆ ಚೆಲ್ಲಿ ನಷ್ಟ ಸಂಭವಿಸಿದೆ.

ಲಾರಿಯಲ್ಲಿದ್ದ ಚಾಲಕ ಹಾಗೂ ಕ್ಲೀನರ್ ಯಾವುದೇ ಪ್ರಾಣಾಪಾಯವಿಲ್ಲದೆ ಪಾರಾಗಿದ್ದು, ಸಣ್ಣ ಪುಟ್ಟ ಗಾಯಗಳಾಗಿದೆ ಎನ್ನಲಾಗಿದೆ.

Join Whatsapp
Exit mobile version