Home ಟಾಪ್ ಸುದ್ದಿಗಳು LIVE | ಗ್ರಾ.ಪಂ. ಫಲಿತಾಂಶ | ಮಂಡ್ಯ, ಮೈಸೂರು, ಚಾಮರಾಜನಗರ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ BSP...

LIVE | ಗ್ರಾ.ಪಂ. ಫಲಿತಾಂಶ | ಮಂಡ್ಯ, ಮೈಸೂರು, ಚಾಮರಾಜನಗರ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ BSP ಬೆಂಬಲಿತರ ಗೆಲುವು

ಮಂಡ್ಯ : ಗ್ರಾಮ ಪಂಚಾಯತ್ ಚುನಾವಣಾ ಫಲಿತಾಂಶ ಹೊರಬೀಳುತ್ತಿದ್ದು, ವಿವಿಧ ಪಕ್ಷಗಳ ಬೆಂಬಲಿತರು ಮುನ್ನಡೆ ಸಾಧಿಸುತ್ತಿರುವ ನಡುವೆ, ದೇಶದ ಪ್ರಮುಖ ರಾಷ್ಟ್ರೀಯ ಪಕ್ಷಗಳಲ್ಲಿ ಒಂದಾಗಿರುವ ಬಹುಜನ ಸಮಾಜ ಪಕ್ಷ ಬೆಂಬಲಿತ ಅಭ್ಯರ್ಥಿಗಳೂ ತಾವೂ ಯಾರಿಗೂ ಕಡಿಮೆಯಿಲ್ಲ ಎಂಬಂತೆ ಸಾಧನೆ ತೋರಿದ್ದಾರೆ.

ಮಂಡ್ಯ, ಮೈಸೂರು, ಬೀದರ್, ಚಾಮರಾಜನಗರ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಬಿಎಸ್ಪಿ ಬೆಂಬಲಿತ ಅಭ್ಯರ್ಥಿಗಳು ಈಗಾಗಲೇ ವಿಜಯ ಪತಾಕೆ ಹಾರಿಸಿದ್ದು, ಸದ್ಯಕ್ಕೆ ಸಿಕ್ಕಿರುವ ಮಾಹಿತಿಗಳನ್ನು ಇಲ್ಲಿ ನೀಡಲಾಗಿದೆ. ರಾಜ್ಯಾದ್ಯಂತ ಗೆದ್ದ ಬಿಎಸ್ಪಿ ಬೆಂಬಲಿತರ ವಿವರ ಸಂಜೆ ವೇಳೆ ಸಂಪೂರ್ಣವಾಗಿ ದೊರೆಯಲಿದೆ.  ಇಲ್ಲಿ ವರೆಗೆ ಲಭ್ಯವಾಗಿರುವ ಮಾಹಿತಿಗಳ ಪ್ರಕಾರ ವಿವಿಧ ಗ್ರಾಮ ಪಂಚಾಯತ್ ಗಳಲ್ಲಿ 10 ಮಂದಿ ಬಿಎಸ್ಪಿ ಬೆಂಬಲಿತರು ವಿಜಯ ಪತಾಕೆ ಹಾರಿಸಿದ್ದಾರೆ.

ಸದ್ಯಕ್ಕೆ ದೊರಕಿರುವ ಮಾಹಿತಿಗಳ ಪ್ರಕಾರ ಗೆದ್ದಿರುವ ಬಿಎಸ್ಪಿ ಬೆಂಬಲಿತ ಅಭ್ಯರ್ಥಿಗಳ ವಿವರ :

➤ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ವಡಿಯಾಂಡ ಗ್ರಾಮದಲ್ಲಿ ಬಿಎಸ್ಪಿ ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಅಧ್ಯಕ್ಷರಾದ ಗೋವಿಂದರಾಜು ವಿ.ಟಿ. ಅವರು 222 ಮತಗಳ ಅಂತರದ ಭರ್ಜರಿ ಗೆಲುವು ಸಾಧಿಸಿದ್ದಾರೆ.

➤ ಮಂಡ್ಯ ವಿಧಾನಸಭಾ ಕ್ಷೇತ್ರದ ಮದ್ದೂರು ತಾಲೂಕಿನ ಕೆರಗೋಡು ಗ್ರಾಮದಲ್ಲಿ ದಿವಾಕರ್ ಕೆರಗೋಡು 218 ಮತಗಳಿಂದ ಭಾರೀ ಗೆಲುವನ್ನು ದಾಖಲಿಸಿದ್ದಾರೆ.

➤ ಮಳವಳ್ಳಿ ತಾಲೂಕಿನ ನಿಟ್ಟೂರು ಹೊಸದೊಡ್ಡಿ ಗ್ರಾಮದ, ಕುಂಬೇಗೌಡನ ದೊಡ್ಡಿಯ ನಿಟ್ಟೂರು 2 ಬ್ಲಾಕ್ ನ ಪ್ರಮೀಳಾ ಸಿ.ಕೆ. ಬಿಎಸ್ಪಿ ಬೆಂಬಲಿತರಾಗಿ ಗೆದ್ದಿದ್ದಾರೆ.

➤ ಮಳವಳ್ಳಿ ತಾಲೂಕಿನ ಕಿರುಗಾವಲು ಗ್ರಾಮದ ಗಿರೀಶ್ ಅವರು ಬಿಎಸ್ಪಿ ಬೆಂಬಲಿತರಾಗಿ ಗೆದ್ದಿದ್ದಾರೆ.

➤ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಬೆಟ್ಟದ ಮಲ್ಲೇನಹಳ್ಳಿ ಗ್ರಾಮ ಪಂಚಾಯತ್ ನ ಪುಟ್ಟರಸಯ್ಯ (ಪುಟ್ಟುರಾಜು) ಬಿಎಸ್ಪಿ ಬೆಂಬಲಿತರಾಗಿ ವಿಜಯ ಪತಾಕೆ ಹಾರಿಸಿದ್ದಾರೆ.

➤ ಚಾಮರಾಜನಗರ ಜಿಲ್ಲೆಯ ಕೊತ್ತಲವಾಡಿ ಗ್ರಾಮ ಪಂಚಾಯತಿಯಲ್ಲಿ ಬಿಎಸ್ಪಿ ಬೆಂಬಲಿತ ಅಭ್ಯರ್ಥಿ ಶಿವಣ್ಣ ದೇವಲಾಪುರ ಗೆದ್ದಿದ್ದಾರೆ.

➤ ದೇವರಹಿಪ್ಪರಗಿ ತಾಲೂಕಿನ ಬೇಕಿನಾಳ ಗ್ರಾಮಪಂಚಾಯತ್ ನ ವಣಕಿಹಾಳ ಗ್ರಾಮದ ಪರಶುರಾಮ ಮತ್ತು ರಸುಲಸಾಬ ಮಳ್ಳಿ ಅವರು ಗೆದ್ದಿದ್ದಾರೆ.

➤ ಮೈಸೂರು ನಾಗನಗಳ್ಳಿ ಗ್ರಾಮಪಂಚಾಯತಿಯಲ್ಲಿ ಶಂಕರ್ ಗೆದ್ದಿದ್ದಾರೆ.

➤ ಚಾಮರಾಜನಗರದ ಬಿಸಲವಾಡಿ ಗ್ರಾಮಪಂಚಾಯತಿಯಲ್ಲಿ ಬಿಎಸ್ ಪಿ ಬೆಂಬಲಿತ ಬಿಸಲವಾಡಿ ಬಾಲರಾಜು ಗೆದ್ದಿದ್ದಾರೆ.

Join Whatsapp
Exit mobile version