Home ಟಾಪ್ ಸುದ್ದಿಗಳು ಪದವಿ ವಿದ್ಯಾರ್ಥಿಗಳು ಯಾವ ವಸ್ತ್ರ ಬೇಕಾದರೂ ಧರಿಸಿ ತರಗತಿಗೆ ಬರಬಹುದು: ಸಚಿವ ಅಶ್ವತ್ಥನಾರಾಯಣ

ಪದವಿ ವಿದ್ಯಾರ್ಥಿಗಳು ಯಾವ ವಸ್ತ್ರ ಬೇಕಾದರೂ ಧರಿಸಿ ತರಗತಿಗೆ ಬರಬಹುದು: ಸಚಿವ ಅಶ್ವತ್ಥನಾರಾಯಣ

ಚಾಮರಾಜನಗರ: ‘ಪದವಿ ಕಾಲೇಜುಗಳಲ್ಲಿ ಸಮವಸ್ತ್ರ ಕಡ್ಡಾಯವಲ್ಲ, ಹಾಗಾಗಿ, ವಿದ್ಯಾರ್ಥಿಗಳು ಯಾವ ರೀತಿಯ ಬಟ್ಟೆ ಹಾಕಿಕೊಂಡು ಬರುವುದಕ್ಕೆ ಅವಕಾಶ ಇದೆ ಎಂದು ಉನ್ನತ ಶಿಕ್ಷಣ ಸಚಿವ ಅಶ್ವತ್ಥನಾರಾಯಣ ಸ್ಪಷ್ಟಪಡಿಸಿದ್ದಾರೆ.

ಈಗ ವಿವಾದ ಇರುವುದು ಪಿಯುಸಿ ಹಂತದಲ್ಲಿ ಮಾತ್ರ. ಡಿಗ್ರಿ ಹಂತದಲ್ಲಿ ಸಮವಸ್ತ್ರ ಇಲ್ಲ. ಹಾಗಾಗಿ ವಿದ್ಯಾರ್ಥಿಗಳು ಯಾವುದೇ ವಸ್ತ್ರ ಧರಿಸಿ ಬರಬಹುದು ಎಂದು ಸಚಿವರು ತಿಳಿಸಿದರು.

ಪದವಿ ಪೂರ್ವ ಕಾಲೇಜುಗಳಲ್ಲಿ ಸಮವಸ್ತ್ರ ಕಡ್ಡಾಯವಿದೆ. ಹಾಗಾಗಿ, ನಿಯಮಕ್ಕೆ ಅನುಸಾರವಾಗಿಯೇ ಬರಬೇಕು. ಹಿಜಾಬ್ ಧರಿಸುವುದಕ್ಕೆ ಅವಕಾಶ ಇಲ್ಲ. ಹಿಜಾಬ್ ಕೇಸರಿ ಶಾಲು ವಿಚಾರದಲ್ಲಿ ಹೈಕೋರ್ಟ್ ಮಧ್ಯಂತರ ಆದೇಶ ನೀಡಿದೆ. ಅದನ್ನು ಎಲ್ಲರೂ ಕಟ್ಟುನಿಟ್ಟಾಗಿ ಪಾಲನೆ ಮಾಡಬೇಕು’ ಎಂದರು.

ನಾಳೆಯಿಂದ ಕಾಲೇಜುಗಳು ಆರಂಭವಾಗಲಿದೆ, ಮುಖ್ಯಮಂತ್ರಿ ಅವರು ಈಗಾಗಲೇ ಸಷ್ಟಪಡಿಸಿದ್ದಾರೆ. ವಿದ್ಯಾರ್ಥಿಗಳು ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ಕೊಡದೆ, ಸೌಹಾರ್ದತೆಯಿಂದ ಕಾಲೇಜುಗಳಿಗೆ ಹಾಜರಾಗಬೇಕು ಎಂದು ಮನವಿ ಮಾಡಿದರು.

Join Whatsapp
Exit mobile version