ನವದೆಹಲಿ: ಬಿಜೆಪಿ ಜೆಡಿಎಸ್ ಮೈತ್ರಿ ಬಗ್ಗೆ ಮತ್ತೆ ಅಸಮಾಧಾನ ಹೊರ ಹಾಕಿದ ಸಿಎಂ ಇಬ್ರಾಹಿಂ, ದೇವೇಗೌಡರೇ..ಲೋಕಸಭೆ ಚುನಾವಣೆಯಲ್ಲಿ ಮೂರು ಸ್ಥಾನಗಳಿಗಾಗಿ ಹೆಚ್ಡಿ ಕುಮಾರಸ್ವಾಮಿ ನಿಮ್ಮನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಅಡ ಇಡುತ್ತಿದ್ದಾರೆ ಎಂದು ಹೇಳಿದ್ದಾರೆ.
ದೆಹಲಿಯಲ್ಲಿ ಮಾತನಾಡಿದ ಅವರು, ಜನತಾದಳದ ಎಲ್ಲಾ ರಾಜ್ಯದ ನಾಯಕರು ಒಟ್ಟಾಗಿ ಸೇರಿ ಮೀಟಿಂಗ್ ಮಾಡ್ತಾ ಇದ್ದೇವೆ ಎಂದಿದ್ದಾರೆ.
ಕೇರಳ, ಮಹಾರಾಷ್ಟ್ರ, ಬಿಹಾರ್ ರಾಜ್ಯದ ಜನತಾದಳದ ನಾಯಕರ ಜೊತೆ ಸಭೆ ಮಾಡ್ತಾ ಇದ್ದೇನೆ. ನಾಳೆ ಮೀಟಿಂಗ್ ಮಾಡ್ತೇವೆ, ಜನತಾದಳ ನಮ್ದೇ ಒರಿಜಿನಲ್ ಸ್ಟ್ರೆoತ್. ಮೀಟಿಂಗ್ ಮಾಡಿ ನಾವು ದೇವೇಗೌಡರಿಗೆ ಹೇಳುತ್ತೇವೆ. ನೀವು ಹಿರಿಯರು ಇದ್ದೀರಿ, ನಿಮ್ಮನ್ನು ನಾವು ತಂದೆ ಸ್ಥಾನದಲ್ಲಿ ಕಾಣ್ತಾ ಇದ್ದೇವೆ. ಕರ್ನಾಟಕದಿಂದ ಹೋದ ಏಕೈಕ ಪ್ರಧಾನ ಮಂತ್ರಿ ನೀವು. ಮಕ್ಕಳ ಮಾತು ಕೇಳಿ ಹಾಳಾಗಬೇಡಿ ಎಂದು ಸಿಎಂ ಇಬ್ರಾಹಿಂ ಹೇಳಿದರು.
ನೀವು ಮಕ್ಕಳ ಮಾತು ಕೇಳಿ ನಮ್ಮನ್ನು ನಡು ನೀರಿನಲ್ಲಿ ಬಿಟ್ಟು ಹೋಗ್ತಾ ಇದ್ದೀರಾ. ಆದರೆ, ನಾವು ಹೋರಾಟ ಮಾಡೋದನ್ನ ನಿಮ್ಮಿಂದಲೇ ಕಲ್ತಿದ್ದೇವೆ. ಅದಕ್ಕೆ ನಾನು ತಿರುಗಾಟ ಮಾಡ್ತಾ ಇದ್ದೇನೆ ಎಂದು ಸಿಎಂ ಇಬ್ರಾಹಿಂ ಹೇಳಿದರು.