ಬೆಂಗಳೂರು: ಕರ್ನಾಟಕ ಸರಕಾರ 49 ಪೊಲೀಸ್ ಇನ್ಸ್ ಪೆಕ್ಟರ್ ಗಳನ್ನು ವರ್ಗಾವಣೆ ಮಾಡಿ ಆದೇಶಿಸಿದೆ. ಪೊಲೀಸ್ ಸಿಬ್ಬಂದಿ ಮಂಡಳಿಯ ಸಭೆಯ ನಿರ್ಣಯದಂತೆ ಹಾಗೂ ದಿನಾಂಕ 27-02-2024ರ ಭಾರತೀಯ ಚುನಾವಣಾ ಆಯೋಗದ ಉಲ್ಲೇಖಿತ ಮಾರ್ಗಸೂಚಿಯನ್ವಯ 49 ಪೊಲೀಸ್ ಇನ್ಸ್ ಪೆಕ್ಟರ್ ಗಳನ್ನು ವರ್ಗಾವಣೆ ಮಾಡಿ ಆದೇಶಿಸಿರೋದಾಗಿ ಸರಕಾರದ ಅಧಿಸೂಚನೆ ತಿಳಿಸಿದೆ.
ಬೆಂಗಳೂರಿನ ತಲಘಟ್ಟಪುರ ಠಾಣೆ ಇನ್ಸ್ ಪೆಕ್ಟರ್ ಜಗದೀಶ್ ಎನ್ ಅವರನ್ನು ಬೆಂಗಳೂರು ನಗರ ನಿಯಂತ್ರಣ ಕೊಠಡಿಗೆ ವರ್ಗಾವಣೆ ಮಾಡಿದ್ದರೇ, ಸಿಸಿಬಿಯ ಸುರೇಶ್ ಪಿ ಅವರನ್ನು ತಲಘಟ್ಟಪುರಕ್ಕೆ ಪಿಎಸ್ಐ ಆಗಿ ವರ್ಗಾವಣೆ ಮಾಡಲಾಗಿದೆ.
ಕಾಟನ್ ಪೇಟೆ ಠಾಣೆ ಪಿಎಸ್ಐ ಯರೀಸ್ವಾಮಿ.ಈ ಅವರನ್ನು ರಾಜ್ಯಗುಪ್ತವಾರ್ತೆಗೆ, ಸಿಸಿಬಿಯ ಸುಧಾಕರ್.ಬಿಎಸ್ ಅವರನ್ನು ಕಾಟನ್ ಪೇಟೆ ಪೊಲೀಸ್ ಠಾಣೆಯ ಪಿಎಸ್ಐ ಆಗಿ ನೇಮಿಸಲಾಗಿದೆ. ಕೆಜಿ ಹಳ್ಳಿ ಠಾಣೆ ಪಿಎಸ್ಐ ಶಿವಸ್ವಾಮಿ ಸಿಬಿ ಅವರನ್ನು ಬೆಂಗಳೂರಿನ ಆಗ್ನೇಯ ವಿಭಾಗದ ಮಹಿಳಾ ಪೊಲೀಸ್ ಠಾಣೆಯ ಪಿಎಸ್ಐ ಆಗಿ ವರ್ಗಾವಣೆ ಮಾಡಲಾಗಿದೆ.