Home ಟಾಪ್ ಸುದ್ದಿಗಳು ಅಸ್ಸಾಮ್’ನ ಹೆಚ್ಚಿನ ಪ್ರದೇಶಗಳಿಂದ AFSPA ಕಾಯ್ದೆ ಹಿಂಪಡೆಯಲು ಸರ್ಕಾರ ಚಿಂತನೆ: ಮುಖ್ಯಮಂತ್ರಿ ಹಿಮಂತ್

ಅಸ್ಸಾಮ್’ನ ಹೆಚ್ಚಿನ ಪ್ರದೇಶಗಳಿಂದ AFSPA ಕಾಯ್ದೆ ಹಿಂಪಡೆಯಲು ಸರ್ಕಾರ ಚಿಂತನೆ: ಮುಖ್ಯಮಂತ್ರಿ ಹಿಮಂತ್

ಗುವಾಹಟಿ: ರಾಜ್ಯದ ಹೆಚ್ಚಿನ ಪ್ರದೇಶಗಳಿಂದ ಕರಾಳ AFSPA ಕಾಯ್ದೆಯನ್ನು ಹಿಂಪಡೆಯಲು ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಅಸ್ಸಾಮ್ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ತಿಳಿಸಿದ್ದಾರೆ.

ಆದರೆ ಹಸಾವೋ ಜಿಲ್ಲೆಗಳಲ್ಲಿ ಗಲಭೆ ಪೀಡಿತ ಎಂಬ ಎಚ್ಚರಿಕೆಯೊಂದಿಗೆ ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ (AFSPA) ಕಾಯ್ದೆ, 1958 ಅನ್ನು ಅಕ್ಟೋಬರ್ 1ರಿಂದ ಆರು ತಿಂಗಳವರೆಗೆ ಟಿನ್ಸುಕಿಯಾ ದಿಬ್ರಗಢ, ಚರೈಡಿಯೋ,ಶಿವಸಾಗರ್, ಜೋರ್ಹತ್, ಗೋಲಾಘಾಟ್, ಕರ್ಬಿ ಅಂಗ್ಲಾಂಗ್ ಮತ್ತು ದಿಮಾ ಪ್ರದೇಶಗಳಲ್ಲಿ ಮುಂದುವರಿಸಲಾಗುವುದು ಎಂದು ತಿಳಿಸಿದ್ದಾರೆ.

ಪಶ್ಚಿಮ ಕರ್ಬು ಅಂಗ್ಲಾಂಗ್ ಜಿಲ್ಲೆಯಲ್ಲಿ ಪರಿಸ್ಥಿತಿ ಗಣನೀಯವಾಗಿ ಸುಧಾರಿಸಿರುವ ಹಿನ್ನೆಲೆಯಲ್ಲಿ ಈ ಕರಾಳ ಮತ್ತು ವಿವಾದಾತ್ಮಕ ಕಾನೂನು ಅನ್ನು ಹಿಂಪಡೆಯಲಾಗಿತ್ತು.

AFSPA ಕಾಯ್ದೆ ಭದ್ರತಾ ಪಡೆಗಳಿಗೆ ಯಾವುದೇ ಪೂರ್ವ ವಾರಂಟ್ ಇಲ್ಲದೆ ಕಾರ್ಯಾಚರಣೆ ನಡೆಸಲು ಮತ್ತು ಯಾರನ್ನಾದರೂ ಬಂಧಿಸಲು ಅಧಿಕಾರ ನೀಡುತ್ತದೆ. ಜೊತೆಗೆ ಭದ್ರತಾ ಪಡೆಗಳು ಯಾರನ್ನಾದರೂ ಗುಂಡಿಕ್ಕಿ ಕೊಂದರೆ ಭದ್ರತಾ ಪಡೆಗಳಿಗೆ ಬಂಧನ ಮತ್ತು ಕಾನೂನು ಕ್ರಮದಿಂದ ವಿನಾಯಿತಿ ಕೊಡುತ್ತದೆ.

ಸದ್ಯ ಅಸ್ಸಾಮ್ ಮತ್ತು ಈಶಾನ್ಯದಲ್ಲಿ ಶಾಂತಿ ಮರಳಿದ್ದು, AFSPA ಎಂಬ ಕರಾಳ ಕಾಯ್ದೆಯನ್ನು ರಾಜ್ಯದ ಶೇಕಡಾ 65 ಪ್ರದೇಶಗಳಿಂದ ಹಿಂಪಡೆಯಲಾಗಿದೆ. ಭವಿಷ್ಯದಲ್ಲಿ ನಾವು ಕ್ಯಾಚಾರ್’ನ ಖಖಿಪುರ ಮತ್ತು ಕರ್ಬಿ ಅಂಗ್ಲಾಂಗ್ ಜಿಲ್ಲೆಯಿಂದ ಹಿಂಪಡೆಯಲು ಪರಿಗಣಿಸುತ್ತಿದ್ದೇವೆ ಎಂದು ಶರ್ಮಾ ತಿಳಿಸಿದ್ದಾರೆ.

ಈ ಹಿಂದೆ ಶಸ್ತ್ರಾಸ್ತ್ರಗಳನ್ನು ತ್ಯಜಿಸಿದ 318 ಮಾಜಿ ಉಗ್ರಗಾಮಿಗಳಿಗೆ ಮುಖ್ಯಮಂತ್ರಿಗಳು ರಾಜ್ಯದ ಡಿಜಿಪಿ ಮತ್ತು ಅಸ್ಸಾಂ ಪೊಲೀಸ್, ಸೇನೆ ಮತ್ತು ಅರೆಸೇನಾ ಪಡೆಗಳ ಇತರ ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಡಿಮ್ಯಾಂಡ್ ಡ್ರಾಫ್ಟ್’ಗಳನ್ನು ಹಸ್ತಾಂತರಿಸಿದ್ದಾರೆ.

ಕಳೆದ ವರ್ಷ ಮೇ ತಿಂಗಳಲ್ಲಿ ನಾನು ಅಧಿಕಾರ ವಹಿಸಿಕೊಂಡ ನಂತರ ವಿವಿಧ ಗುಂಪುಗಳ 6,780 ಕ್ಕೂ ಹೆಚ್ಚು ಕಾರ್ಯಕರ್ತರು ತಮ್ಮ ಶಸ್ತ್ರಾಸ್ತ್ರಗಳನ್ನು ತ್ಯಜಿಸಿದ್ದಾರೆ ಎಂದು ಅವರು ತಿಳಿಸಿದರು.

Join Whatsapp
Exit mobile version