Home ಟಾಪ್ ಸುದ್ದಿಗಳು ತಮಿಳುನಾಡಿಗೆ ನೀರು ಹರಿಸುವುದನ್ನು ನಿಲ್ಲಿಸಿದ ಸರ್ಕಾರ

ತಮಿಳುನಾಡಿಗೆ ನೀರು ಹರಿಸುವುದನ್ನು ನಿಲ್ಲಿಸಿದ ಸರ್ಕಾರ

ಮಂಡ್ಯ: ಕೆಆರ್‌ಎಸ್‍ನಲ್ಲಿ ಗಣನೀಯ ಪ್ರಮಾಣದಲ್ಲಿ ನೀರು ಕಡಿಮೆ ಆಗುತ್ತಿರುವ ಹೊತ್ತಿನಲ್ಲಿ ತಮಿಳುನಾಡಿಗೆ ನೀರು ಹರಿಸುವುದನ್ನು ರಾಜ್ಯ ಸರ್ಕಾರ ನಿಲ್ಲಿಸಿದೆ.

ಪ್ರಾಧಿಕಾರದ ಆದೇಶದ ಪ್ರಕಾರ ಸೆಪ್ಟೆಂಬರ್ 11 ರವರೆಗೂ ನಿತ್ಯ 5 ಸಾವಿರ ಕ್ಯೂಸೆಕ್ ನೀರನ್ನು ತಮಿಳುನಾಡಿಗೆ ಹರಿಸಬೇಕಿತ್ತು. ಆದರೆ ಡ್ಯಾಂ ಕೆಳ ಭಾಗದಲ್ಲಿ ಮಳೆ ಆಗುತ್ತಿರುವ ಕಾರಣ ನಾಲ್ಕು ದಿನ ಮೊದಲೇ ಅಂದರೆ ಇಂದಿನಿಂದಲೇ ತಮಿಳುನಾಡಿಗೆ ನೀರು ಹರಿಸುವುದನ್ನು ಬಂದ್ ಮಾಡಿದೆ.

ಇಂದು ತಮಿಳುನಾಡಿಗೆ ನೀರು ಹರಿಸುವ ಬದಲು ರೈತರ ಬೆಳೆಗಳಿಗಾಗಿ ಕಾಲುವೆಗಳಿಗೆ ನೀರು ಹರಿಸಿದೆ. ಕಳೆದ 11 ದಿನದಲ್ಲಿ ತಮಿಳುನಾಡಿಗೆ 62 ಸಾವಿರ ಕ್ಯೂಸೆಕ್ ನೀರು ಹರಿದಿದೆ.

ಪ್ರಾಧಿಕಾರದ ಲೆಕ್ಕದ ಪ್ರಕಾರ ಸೆಪ್ಟೆಂಬರ್ 11ರೊಳಗೆ 75 ಸಾವಿರ ಕ್ಯೂಸೆಕ್ ನೀರು ಹರಿಯಬೇಕು. ಸದ್ಯ ನದಿಯಲ್ಲಿ ಹರಿಯುತ್ತಿರುವ ನೀರು 13 ಸಾವಿರ ಕ್ಯೂಸೆಕ್‍ನಷ್ಟಿದೆ. ಇದು ತಲುಪುವ ಹೊತ್ತಿಗೆ ಲೆಕ್ಕ ಸರಿ ಹೋಗುತ್ತದೆ ಎನ್ನಲಾಗಿದೆ. ಪ್ರಸ್ತುತ ಕೆಆರ್‌ಎಸ್‍ನಲ್ಲಿ 21 ಟಿಎಂಸಿ ನೀರಿದೆ.

Join Whatsapp
Exit mobile version