ಅತ್ತಿಬೆಲೆ ಪಟಾಕಿ ದುರಂತ| ಕಾರ್ಮಿಕರ ಸುರಕ್ಷತೆಗಾಗಿ ಸರಕಾರ ಸೂಕ್ತ ಸುರಕ್ಷಾ ಕ್ರಮ ಕೈಗೊಳ್ಳಲಿ: SDTU

Prasthutha|

ಬೆಂಗಳೂರು: ಅತ್ತಿಬೆಲೆ ಪಟಾಕಿ ಅವಘಡದಲ್ಲಿ ಗ್ರಾಹಕರೊಬ್ಬರು ಸೇರಿ ಒಟ್ಟು ಹದಿನಾರು ಮಂದಿ ಸಾವನ್ನಪ್ಪಿದ್ದಾರೆ ಈ ದುರಂತದಲ್ಲಿ ಅಗಲಿದ ಮೃತರ ಕುಟುಂಬಕ್ಕೆ ಸ್ರಷ್ಟಿಕರ್ತನು ನೋವನ್ನು ಸಹಿಸುವ ಶಕ್ತಿ ದಯಪಾಲಿಸಲಿ ಎಂದು ಸೋಶಿಯಲ್ ಡೆಮಾಕ್ರೆಟಿಕ್ ಟ್ರೇಡ್ ಯೂನಿಯನ್ ( SDTU) ಬೆಂಗಳೂರು ದಕ್ಷಿಣ ಜಿಲ್ಲಾದ್ಯಕ್ಷ ಉಬೈದುಲ್ಲಾ ಶೆರೀಫ್ ಬೆಂಗಳೂರು ಸಂತಾಪ ವ್ಯಕ್ತಪಡಿಸಿದ್ದಾರೆ.

- Advertisement -

ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ ಅವರು ವಿವಿಧ ಕ್ಷೇತ್ರಗಳಲ್ಲಿ ರಾಜ್ಯದಾದ್ಯಂತ ಸೂಕ್ತ ಸುರಕ್ಷಾ ಕ್ರಮ ಇಲ್ಲದೆ ಕಾರ್ಮಿಕರನ್ನು ಉದ್ಯೋಗದಾತರು ಬಳಸಿ ವಿವಿಧ ಅಪಾಯವನ್ನೆದುರಿಸಿ ಸಾವು ನೋವುಗಳಿಗೆ ಶ್ರಮಿಕರು ಕೊರಲೊಡ್ಡಿದ ಹಲವು ಘಟನೆಗಳು ನಮ್ಮ ಮುಂದಿರುವಾಗ ಸರಕಾರ ಕಾರ್ಮಿಕರ ಸುರಕ್ಷಾ ಕ್ರಮಕ್ಕೆ ವಿಶೇಷ ಆದ್ಯತೆ ನೀಡಬೇಕು
ಕಾರ್ಮಿಕ ಶಕ್ತಿ ದೇಶದ ಶಕ್ತಿಯಾಗಿದೆ ಕಾರ್ಮಿಕರ ಶ್ರಮ ದೇಶದ ಅಭಿವೃದ್ಧಿಗೆ ಪೂರಕವಾಗಿರುವಾಗ ಅವರನ್ನು ಬಳಸುವ ಸ್ಥಿತಿವಂತರು ಅವರ ಶ್ರಮವನ್ನು ದುರುಪಯೋಗ ಪಡಿಸಿ ಶ್ರಮಿಕ ವರ್ಗದ ಜೀವ ಹಾಗೂ ಜೀವನಕ್ಕೆ ಕತ್ತು ತರುವ ಕೆಲಸಕ್ಕೆ ಪ್ರಯತ್ನಿಸಬಾರದು
ವೈಜ್ಞಾನಿಕವಾಗಿ ತಂತ್ರಜ್ಞಾನದಿಂದ ಮುಂದುವರಿದ ಇಂದಿನ ಯುಗದಲ್ಲಿ ಅಪಾಯಕಾರಿಯಾದ ಕ್ಷೇತ್ರಗಳಲ್ಲಿ ಕಾರ್ಮಿಕರಾಗಿ ಕೆಲಸ ನಿರ್ವಹಿಸುವ ಎಲ್ಲಾ ಕಾರ್ಮಿಕರ ಸುರಕ್ಷಾ ವ್ಯವಸ್ಥೆಗಳ ನ್ನು ಖಾತ್ರಿ ಪಡಿಸಲು ಸರಕಾರ ಕ್ರಮ ಕೈಗೊಳ್ಳಬೇಕು ಎಂದು SDTU ಸರಕಾರವನ್ನು ಆಗ್ರಹಿಸುತ್ತದೆ ಎಂದು ಉಬೈದುಲ್ಲಾ ಶೆರೀಫ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Join Whatsapp