Home ಟಾಪ್ ಸುದ್ದಿಗಳು ಸೆಂಥಿಲ್ ಬಾಲಾಜಿರನ್ನು ಸಚಿವ ಸಂಪುಟದಿಂದ ವಜಾಗೊಳಿಸಿದ ಆದೇಶ ಹಿಂಪಡೆದ ರಾಜ್ಯಪಾಲ

ಸೆಂಥಿಲ್ ಬಾಲಾಜಿರನ್ನು ಸಚಿವ ಸಂಪುಟದಿಂದ ವಜಾಗೊಳಿಸಿದ ಆದೇಶ ಹಿಂಪಡೆದ ರಾಜ್ಯಪಾಲ

ತಮಿಳುನಾಡು ಸಚಿವ ವಿ ಸೆಂಥಿಲ್ ಬಾಲಾಜಿ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸುವ ಆದೇಶವನ್ನು ರಾಜ್ಯಪಾಲ ಆರ್ ಎನ್ ರವಿ ತಡೆಹಿಡಿದಿದ್ದಾರೆ ಎಂದು ತಿಳಿದು ಬಂದಿದೆ.

ಸೆಂಥಿಲ್ ಬಾಲಾಜಿ ವಿಚಾರವಾಗಿ ತಮಿಳುನಾಡು ರಾಜ್ಯಪಾಲ ರವಿ ಅಟಾರ್ನಿ ಜನರಲ್ನಿಂದ ಕಾನೂನು ಅಭಿಪ್ರಾಯ ಪಡೆಯಲು ನಿರ್ಧರಿಸಿದ್ದಾರೆ. ಕಾನೂನು ಅಭಿಪ್ರಾಯ ಬರುವವರೆಗೆ ರಾಜಭವನದ ಹಿಂದಿನ ಆದೇಶವನ್ನು ಅಮಾನತುಗೊಳಿಸಲಾಗಿದೆ ಎಂದು ರಾಜಭವನದ ಮೂಲಗಳು ತಿಳಿಸಿವೆ. ಇದರರ್ಥ ಬಾಲಾಜಿ ಸದ್ಯಕ್ಕೆ ಸಚಿವ ಸಂಪುಟದಲ್ಲಿ ಮುಂದುವರಿಯಲಿದ್ದಾರೆ.
ಅಟಾರ್ನಿ ಜನರಲ್ ಅವರಿಂದ ಕಾನೂನು ಅಭಿಪ್ರಾಯ ಪಡೆದು ನಂತರವಷ್ಟೇ ಅವರನ್ನು ವಜಾ ಮಾಡಬೇಕೋ ಬೇಡವೋ ಎಂಬುದನ್ನು ನಿರ್ಧರಿಸಬೇಕು ಎಂದು ಗೃಹ ಸಚಿವರು ರಾಜ್ಯಪಾಲರಿಗೆ ಸಲಹೆ ನೀಡಿದ್ದರು. ಗುರುವಾರ ಸಂಜೆ ತಮಿಳುನಾಡು ರಾಜ್ಯಪಾಲ ಆರ್.ಎನ್.ರವಿ ಅವರು ಸಚಿವ ಸೆಂಥಿಲ್ ಬಾಲಾಜಿ ಅವರನ್ನು ತಕ್ಷಣವೇ ಸಚಿವ ಸಂಪುಟದಿಂದ ವಜಾಗೊಳಿಸಿದ್ದರು.

Join Whatsapp
Exit mobile version