Home ಟಾಪ್ ಸುದ್ದಿಗಳು AFSPA ಕುರಿತು ಸರ್ಕಾರ ಸಕಾರಾತ್ಮಕ ಕ್ರಮ: ಅಸ್ಸಾಮ್ ಮುಖ್ಯಮಂತ್ರಿ

AFSPA ಕುರಿತು ಸರ್ಕಾರ ಸಕಾರಾತ್ಮಕ ಕ್ರಮ: ಅಸ್ಸಾಮ್ ಮುಖ್ಯಮಂತ್ರಿ

ಗುವಾಹಟಿ: ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ (AFSPA) ಕಾಯ್ದೆಗೆ ಸಂಬಂಧಿಸಿದಂತೆ ಸರ್ಕಾರ ಪ್ರಾಯೋಗಿಕ ಕ್ರಮಗಳನ್ನು ತೆಗೆದುಕೊಳ್ಳಲಿದೆ ಎಂದು ಅಸ್ಸಾಮ್ ಮುಖ್ಯಮಂತ್ರಿ ಹಿಮಂತ್ ಬಿಸ್ವಾ ಶರ್ಮಾ ತಿಳಿಸಿದ್ದಾರೆ.

AFSPA ಕಾಯ್ದೆಗೆ ಸಂಬಂಧಿಸಿದಂತೆ ಕೆಲವು ಸಕಾರಾತ್ಮಕ ಕ್ರಮಗಳನ್ನು ಅನುಸರಿಸುವ ಅಗತ್ಯವಿರುತ್ತದೆ. ಈ ನಿಟ್ಟಿನಲ್ಲಿ ಸರ್ಕಾರ ಸೂಕ್ತ ಸಕಾರಾತ್ಮಕ ಕ್ರಮ ಜರುಗಿಸುವ ಕುರಿತು ಆಶಾವಾದಿಯಾಗಿದ್ದೇನೆ ಎಂದು ಗುವಾಹಟಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಶರ್ಮಾ ತಿಳಿಸಿದ್ದರು.

AFSPA ಕಾಯ್ದೆ ಇನ್ನು ನಾಲ್ಕು ತಿಂಗಳ ಬಳಿಕ ಅಸ್ಸಾಮ್ ನಲ್ಲಿ ನವೀಕರಣಗೊಳ್ಳಲಿದೆ.

ಸರ್ಕಾರದೊಂದಿಗೆ ಭಿನ್ನಮತೀಯ ಗುಂಪುಗಳು ಮಾತುಕತೆಗೆ ಉತ್ಸುಕರಾಗಿರುವುದರಿಂದ ರಾಜ್ಯದಲ್ಲಿ ಮಾವೋವಾದಿಗಳ ಯುಗ ಅಂತ್ಯ ಕಾಣುತ್ತಿದೆ ಎಂದು ಅಸ್ಸಾಮ್ ಮುಖ್ಯಮಂತ್ರಿ ತಿಳಿಸಿದ್ದಾರೆ.

Join Whatsapp
Exit mobile version