Home ಟಾಪ್ ಸುದ್ದಿಗಳು ಪಿಎಸ್ಐ ನೇಮಕಾತಿ ಪರೀಕ್ಷೆ ಹಗರಣದಲ್ಲಿ ಕೈ ಹಾಕಿರುವವರು ಎಷ್ಟು ದೊಡ್ಡವರಾದರೂ ಸರ್ಕಾರ ಬಿಡುವುದಿಲ್ಲ: ಆರಗ ಜ್ಞಾನೇಂದ್ರ

ಪಿಎಸ್ಐ ನೇಮಕಾತಿ ಪರೀಕ್ಷೆ ಹಗರಣದಲ್ಲಿ ಕೈ ಹಾಕಿರುವವರು ಎಷ್ಟು ದೊಡ್ಡವರಾದರೂ ಸರ್ಕಾರ ಬಿಡುವುದಿಲ್ಲ: ಆರಗ ಜ್ಞಾನೇಂದ್ರ

ಕಲಬುರಗಿ: ಪಿಎಸ್ಐ ನೇಮಕಾತಿ ಪರೀಕ್ಷೆ ಹಗರಣದಲ್ಲಿ ಕೈ ಹಾಕಿರುವರು ಯಾರೇ ಎಷ್ಟೇ  ದೊಡ್ಡವರಾದರೂ ಸರ್ಕಾರ ಬಿಡುವುದಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಿಎಸ್ಐ ನೇಮಕಾತಿ ಹಗರಣವನ್ನು ಸರ್ಕಾರ ಮೂಲ ಮಟ್ಟದ ತನಿಖೆ ನಡೆಸುತ್ತಿದ್ದು, ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ ಎಂದು ಹೇಳಿದರು.

ಕಾಂಗ್ರೆಸ್ ಪಕ್ಷದವರು ಸರಕಾರದ ಕೆಲ ಸಚಿವರ ತೇಜೋವಧೆ ಮಾಡುತ್ತಿದ್ದಾರೆ. ತನಿಖೆ ಪಾರದರ್ಶಕವಾಗಿ ನಡೆಯುತ್ತಿದ್ದು, ಹಗರಣದಲ್ಲಿ ಪಾಲ್ಗೊಂಡವರ ವಿರುದ್ದ ಅತ್ಯಂತ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ 300 ಕೋಟಿ ಹಗರಣ ಆಗಿದೆ ಎಂದು ಆರೋಪಿಸಿದ್ದಾರೆ. 3000 ಕೋಟಿ ಎಂದೇ  ಆರೋಪ ಮಾಡಲಿ. ಅವರಿಗೆ ಮಾತಾಡಲು ವಾಕ್ ಸ್ವಾತಂತ್ರವಿದೆ. ದಾಖಲಾತಿ ಕೊಡಿ ಎಂದರೆ ಕಾಂಗ್ರೆಸ್ ಅವರು ಓಡಿಹೋಗುತ್ತಾರೆ. ಈ ಪ್ರಕರಣದಲ್ಲಿ ಬಹುತೇಕ ಸಿಲುಕಿದವರೇ ಕಾಂಗ್ರೆಸ್ ನವರು. ತನಿಖೆ ಸರಿಯಾದ ದಿಕ್ಕಿನಲ್ಲಿ ನಡೆಯುತ್ತಿದೆ ಎಂದು ಗೃಹ ಸಚಿವರು ವಿವರಣೆ ನೀಡಿದರು.

Join Whatsapp
Exit mobile version