ಬೇಹುಗಾರಿಕಾ ಪ್ರಕರಣದಲ್ಲಿ ಬಂಧನವಾಗಿದ್ದ ದಾವಿಂದರ್ ಸಿಂಗ್ ವಿರುದ್ಧ ಸರ್ಕಾರದ ಸಂಶಯಾಸ್ಪದ ನಡೆ : ಭುಗಿಲೆದ್ದ ರಾಜಕೀಯ ವಿವಾದ

Prasthutha|

ಜಮ್ಮು: ಭಯೋತ್ಪಾದನೆ ಮತ್ತು ಬೇಹುಗಾರಿಕೆಯಲ್ಲಿ ಭಾಗಿಯಾದ ಆರೋಪದ ಮೇಲೆ ಕಳೆದ ವರ್ಷ ಬಂಧನಕ್ಕೊಳಗಾಗಿದ್ದ ಮಾಜಿ ಪೊಲೀಸ್ ಅಧಿಕಾರಿ ದಾವಿಂದರ್ ಸಿಂಗ್ ಅವರನ್ನು ಜಮ್ಮು ಕಾಶ್ಮೀರ ಸರ್ಕಾರ ಮೇ ತಿಂಗಳಲ್ಲಿ ಕರ್ತವ್ಯದಿಂದ ವಜಾಗೊಳಿಸಿತ್ತು. ಸರ್ಕಾರ ದಾವಿಂದರ್ ಸಿಂಗ್ ವಿಷಯದಲ್ಲಿ ಕೆಲವೊಂದು ಅಂಶಗಳನ್ನು ಸಾರ್ವಜನಿಕರಿಂದ ಮುಚ್ಚಿಡುವ ಮೂಲಕ ಸೋಮವಾರ ರಾಜಕೀಯ ವಿವಾದಕ್ಕೆ ಕಾರಣವಾಗಿತ್ತು. ರಾಜ್ಯಪಾಲರಾದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಮೇ 20 ರಂದು ದಾವಿಂದರ್ ಸಿಂಗ್ ಅವರನ್ನು ಸೇವೆಯಿಂದ ವಜಾಗೊಳಿಸಿದ್ದರು. ಮಾತ್ರವಲ್ಲದೇ ಸಿಂಗ್ ಮೇಲಿರುವ ಆರೋಪದ ಕುರಿತು ತನಿಖೆ ನಡೆಸದೆ ನೇರವಾಗಿ ವಜಾಗೊಳಿಸಿರುವುದು ರಾಜಕೀಯವಾಗಿ ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು.
ಪ್ರತಿಪಕ್ಷಗಳು ಸರ್ಕಾರ ವಿರುದ್ಧ ಹಲವು ಆರೋಪಗಳನ್ನು ಮಾಡಿದೆ. ಭಯೋತ್ಪಾದನಾ ವಿರೋಧಿ ಕಾನೂನುಗಳ ಅಡಿಯಲ್ಲಿ ಬಂಧಿಸಲ್ಪಟ್ಟ ಅಮಾಯಕ ಕಾಶ್ಮೀರಿಗಳು ವರ್ಷಗಳ ಕಾಲ ಜೈಲುಗಳಲ್ಲಿ ಕೊಳೆಯುತ್ತಾರೆ. ಮಾತ್ರವಲ್ಲದೆ ವಿಚಾರಣೆ ನಡೆದು ಕಠಿಣ ಶಿಕ್ಷೆಗೊಳಪಡಿಸಲಾಗುತ್ತದೆ. ನಿರಪರಾಧಿ ಎಂದು ಸಾಬೀತಾಗುವವರೆಗೂ ಕಾಶ್ಮೀರಿಗಳನ್ನು ಅಪರಾಧಿಗಳೆಂದು ಪರಿಗಣಿಸಲಾಗುತ್ತದೆ. ಆದರೆ ಸರ್ಕಾರ ಮತ್ತು ಆಡಳಿತ ವ್ಯವಸ್ಥೆ ಒಬ್ಬ ಪೋಲಿಸ್ ಉಗ್ರನಿಗೆ ಅನುಕೂಲ ಮಾಡಿರುವುದು ದುರಂತ ಬೆಳವಣಿಗೆ. ಆದರೆ ಉಗ್ರರ ಜೊತೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪೋಲಿಸ್ ಅಧಿಕಾರಿಯ ವಿರುದ್ಧ ಸರ್ಕಾರ ತನಿಖೆಗೆ ಆದೇಶಿಸುವುದಿಲ್ಲ. ಕೆಲವು ಮೋಸದ ಘಟನೆಗಳನ್ನು ಆಯೋಜಿಸಲು ಸಿಂಗ್ ಸರ್ಕಾರದ ವ್ಯವಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾನೆಯೇ ಎಂದು ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಟ್ವೀಟ್ ಮಾಡಿದ್ದಾರೆ.
ಕಾಂಗ್ರೆಸ್ ವಕ್ತಾರರಾದ ರಣದೀಪ್ ಸುರ್ಜೇವಾಲಾ ಭಾನುವಾರ ಟ್ವೀಟ್ ಮೂಲಕ ಪ್ರತಿಕ್ರಿಯಿಸಿ ಪುಲ್ವಾಮ ದಾಳಿಯಲ್ಲಿ ಸಿಂಗ್ ಅವರ ಪಾತ್ರ, ಸಹಚರರ ಮಾಹಿತಿ, ಕೇಂದ್ರ ಮರೆಮಾಚುತ್ತಿರುವ ಅಂಶ, ಸಿಂಗ್ ಅವರ ವಿಚಾರಣೆ ನಡೆಸದಿರುವ ಕುರಿತ ವಾಸ್ತವಿಕತೆಯನ್ನು ಬಹಿರಂಗ ಪಡಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಪ್ರತಿಪಕ್ಷಗಳ ಆರೋಪವನ್ನು ತಳ್ಳಿಹಾಕಿರುವ ಗವರ್ನರ್ ಲೆಫ್ಟಿನೆಂಟ್ ಜನರಲ್ ಮನೋಜ್ ಸಿನ್ಹಾ ಅವರು, ಪೊಲೀಸ್ ಅಧೀಕ್ಷಕರಾಗಿದ್ದ ಸಿಂಗ್ ಅವರ ಚಟುವಟಿಕೆಗಳ ಹಿನ್ನೆಲೆಯಲ್ಲಿ ಆತನನ್ನು ಸೇವೆಯಿಂದ ವಜಾಗೊಳಿಸಿರುವುದು ತೃಪ್ತಿ ನೀಡಿದೆ. ರಾಜ್ಯದ ಭದ್ರತೆಯ ಹಿತದೃಷ್ಟಿಯಿಂದ ದಾವಿಂದರ್ ಸಿಂಗ್ ಪ್ರಕರಣವನ್ನು ವಿಚಾರಣೆ ನಡೆಸುವುದು ಸೂಕ್ತವಲ್ಲ. ಆಡಳಿತ ವಿಭಾಗದ ಆಯುಕ್ತ ಕಾರ್ಯದರ್ಶಿ ಹೊರಡಿಸಿದ ಆದೇಶದನ್ವಯ ಸಂವಿಧಾನದ ಕಲಂ 311 ರ ಕಲಂ 2 ರಲ್ಲಿ ಕಳಂಕಿತ ವ್ಯಕ್ತಿಯನ್ನು ವಿಚಾರಣೆಯ ಮೊದಲು ವಜಾಕ್ಕೆ ಅವಕಾಶವಿದೆಯೆಂದು ನನ್ನ ನಡೆಯನ್ನು ಸಮರ್ಥಿಸಿದರು. ಮಾತ್ರವಲ್ಲದೆ ಎನ್.ಐ.ಎ ಯು ಸಿಂಗ್ ಮತ್ತು ಸಹಚರರನ್ನು ಬಂಧಿಸಿ ವಿಚಾರಣೆಗೊಳಪಡಿಸಿದೆಯೆಂದು ಸರ್ಕಾರ ತಿಳಿಸಿದೆ.

Join Whatsapp