Home ಟಾಪ್ ಸುದ್ದಿಗಳು ಮುಂದುವರಿದ ಹೆಸರು ಬದಲಾವಣೆ ಚಾಳಿ| ರಾಷ್ಟ್ರೀಯ ಉದ್ಯಾನವನದ ಮರುನಾಮಕರಣ ಮಾಡಿದ ಅಸ್ಸಾಂ ಸರ್ಕಾರ!

ಮುಂದುವರಿದ ಹೆಸರು ಬದಲಾವಣೆ ಚಾಳಿ| ರಾಷ್ಟ್ರೀಯ ಉದ್ಯಾನವನದ ಮರುನಾಮಕರಣ ಮಾಡಿದ ಅಸ್ಸಾಂ ಸರ್ಕಾರ!

ಗುವಾಹಟಿ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಹೆಸರನ್ನು ದೇಶದ ಅತ್ಯುನ್ನತ ಕ್ರೀಡಾ ಗೌರವವಾದ ಖೇಲ್ ರತ್ನದಿಂದ ಬದಲಾಯಿಸಿದ ಬೆನ್ನಲ್ಲೇ ರಾಷ್ಟ್ರೀಯ ಉದ್ಯಾನವನದ ಹೆಸರನ್ನೂ ಅಸ್ಸಾಂ ಸರ್ಕಾರ ತೆಗೆದುಹಾಕಿದೆ.

ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನದ ಹೆಸರನ್ನು ಒರಾಂಗ್ ರಾಷ್ಟ್ರೀಯ ಉದ್ಯಾನವನವನ್ನಾಗಿ ಬದಲಾಯಿಸಲು ಅಸ್ಸಾಂ ಸರ್ಕಾರವು ನಿರ್ಣಯವನ್ನು ಅಂಗೀಕರಿಸಿದೆ. ಇದನ್ನು ಒರಾಂಗ್ ರಾಷ್ಟ್ರೀಯ ಉದ್ಯಾನ ಮತ್ತು ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನ ಎಂದೂ ಕರೆಯಲಾಗುತ್ತಿತ್ತು. ಆದಾಗ್ಯೂ, ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನವನ್ನು ಅಧಿಕೃತವಾಗಿ ಕೈಬಿಡಲು ಸರ್ಕಾರ ನಿರ್ಧರಿಸಿದ್ದು, ಉದ್ಯಾನವನದ ಹೆಸರನ್ನು ಬದಲಾಯಿಸಲು ಹಲವಾರು ಸಂಘ ಸಂಸ್ಥೆಗಳ ಒತ್ತಾಯದ ಮೇರೆಗೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ರಾಜ್ಯ ಸರ್ಕಾರ ಹೇಳಿಕೊಂಡಿದೆ.

ಇದು ಬಂಗಾಳ ಹುಲಿಗಳ ನೆಲೆಯಾಗಿದೆ. ಬ್ರಹ್ಮಪುತ್ರದ ಉತ್ತರ ಕರಾವಳಿಯ ಒರಾಂಗ್, ಉದಲ್ಪುರಿ ಮತ್ತು ಸೋನಿತ್ಪುರ್ ಜಿಲ್ಲೆಗಳಲ್ಲಿ ಹರಡಿರುವ ಈ ರಾಷ್ಟ್ರೀಯ ಉದ್ಯಾನವನವು ಭಾರತೀಯ ಖಡ್ಗಮೃಗಗಳು, ಬಂಗಾಳ ಹುಲಿಗಳು, ಕಾಡುಹಂದಿ, ಕಾಡಾನೆ ಮತ್ತು ಕಾಡು ಎಮ್ಮೆಗಳಿಗೆ ಹೆಸರುವಾಸಿಯಾಗಿದೆ.

79.28 ಚದರ ಕಿ.ಮೀ ಪ್ರದೇಶವನ್ನು ಒಳಗೊಂಡ ಈ ಉದ್ಯಾನವನವನ್ನು 1985 ರಲ್ಲಿ ವನ್ಯಜೀವಿ ಅಭಯಾರಣ್ಯವೆಂದು ಘೋಷಿಸಲಾಯಿತು. ಇದನ್ನು 1999 ರಲ್ಲಿ ರಾಷ್ಟ್ರೀಯ ಉದ್ಯಾನವನವಾಗಿ ಮೇಲ್ದರ್ಜೆಗೇರಿಸಲಾಯಿತು.

Join Whatsapp
Exit mobile version