Home ಟಾಪ್ ಸುದ್ದಿಗಳು 2024ರಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ರಾಜಸ್ಥಾನ ಮಾದರಿಯ ಆರೋಗ್ಯ ಯೋಜನೆ ಜಾರಿ: ರಾಹುಲ್ ಗಾಂಧಿ

2024ರಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ರಾಜಸ್ಥಾನ ಮಾದರಿಯ ಆರೋಗ್ಯ ಯೋಜನೆ ಜಾರಿ: ರಾಹುಲ್ ಗಾಂಧಿ

ವಯನಾಡು: 2024ರಲ್ಲಿ ತಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ದೇಶದಾದ್ಯಂತ ರಾಜಸ್ಥಾನ ಮಾದರಿಯ ಆರೋಗ್ಯ ಯೋಜನೆ ಜಾರಿಗೆ ತರುವುದಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗುರುವಾರ ಭರವಸೆ ನೀಡಿದ್ದಾರೆ.

ಕೇರಳದಲ್ಲಿ ತಮ್ಮ ಸ್ವಕ್ಷೇತ್ರ ವಯನಾಡು ಪ್ರವಾಸದಲ್ಲಿರುವ ರಾಹುಲ್ ಗಾಂಧಿ, ರಾಜಸ್ಥಾನದಲ್ಲಿ ಕಾಂಗ್ರೆಸ್ ಸರ್ಕಾರವು ಬಡವರ ಕಲ್ಯಾಣಕ್ಕಾಗಿ ಪ್ರಾರಂಭಿಸಿದ ಆರೋಗ್ಯ ಯೋಜನೆಯನ್ನು ಶ್ಲಾಘಿಸಿದರು. 2024ರ ಲೋಕಸಭೆ ಚುನಾವಣೆ ಗೆದ್ದು ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದೆಲ್ಲೆಡೆ ರಾಜಸ್ಥಾನ ಮಾದರಿಯ ಯೋಜನೆ ಜಾರಿ ಮಾಡುವುದಾಗಿ ಅವರು ಹೇಳಿದರು.

Join Whatsapp
Exit mobile version