Home ಟಾಪ್ ಸುದ್ದಿಗಳು ದೃಷ್ಟಿ ಹೊಂದಿರುವ ಕೇಂದ್ರ ಸರ್ಕಾರದ ಅವಶ್ಯಕತೆ ಇದೆ: ರಾಹುಲ್ ಗಾಂಧಿ

ದೃಷ್ಟಿ ಹೊಂದಿರುವ ಕೇಂದ್ರ ಸರ್ಕಾರದ ಅವಶ್ಯಕತೆ ಇದೆ: ರಾಹುಲ್ ಗಾಂಧಿ

ಹೊಸದಿಲ್ಲಿ : ಭಾರತವು ಕೊರೋನಾ ಸೋಂಕಿನಿಂದ ತತ್ತರಿಸಿಹೋಗಿದ್ದು, ದೇಶದಲ್ಲಿ ಕೋವಿಡ್ ನಿಯಂತ್ರಿಸಲು ವಿಫಲವಾದ ಕೇಂದ್ರ ಸರಕಾರವನ್ನು ಟೀಕಿಸಿರುವ ಕಾಂಗ್ರೆಸ್ ಹಿರಿಯ ಮುಖಂಡ ರಾಹುಲ್ ಗಾಂಧಿ, ಸೆಂಟ್ರಲ್ ವಿಸ್ಟಾ ಯೋಜನೆ ಈಗ ಅನಿವಾರ್ಯವಲ್ಲ, ಆದರೆ ‘ದೃಷ್ಟಿ ಹೊಂದಿರುವ ಕೇಂದ್ರ ಸರ್ಕಾರ ಅಗತ್ಯವಿದೆ’ ಎಂದು ಟ್ವೀಟ್ ಮಾಡಿದ್ದಾರೆ.

‘ಒಬ್ಬರಿಗೊಬ್ಬರು ಸಹಾಯ ಮಾಡುವ ಮೂಲಕ, ಸಾಮಾನ್ಯ ಜನರು ಇನ್ನೊಬ್ಬರ ಹೃದಯವನ್ನು ಸ್ಪರ್ಶಿಸಲು ಒಬ್ಬರ ಕೈಗಳನ್ನು ಮುಟ್ಟಬೇಕಾಗಿಲ್ಲ ಎಂದು ತೋರಿಸುತ್ತಾರೆ. ಸಹಾಯ ಮಾಡುವುದನ್ನು ಮುಂದುವರಿಸಿ’ ಎಂದು ಅವರು ಹಿಂದಿಯಲ್ಲಿ ಮಾಡಿದ ಟ್ವೀಟ್‌ನಲ್ಲಿ #TogetherStronger ಎಂಬ ಹ್ಯಾಶ್‌ಟ್ಯಾಗ್ ಬಳಸಿ ಸಾಮಾನ್ಯ ಜನರು ಪರಸ್ಪರ ಸಹಾಯ ಮಾಡಿರುವ ಬಗ್ಗೆ ಶ್ಲಾಘಿಸಿದ್ದಾರೆ. ಜನರು ಪರಸ್ಪರ ಸಹಾಯ ಮಾಡುವುದನ್ನು ಮುಂದುವರೆಸಲು ಮತ್ತು ‘ಕುರುಡು ವ್ಯವಸ್ಥೆಯ’ ವಾಸ್ತವತೆಯನ್ನು ಬಹಿರಂಗಪಡಿಸಲು ಅವರು ಕೇಳಿಕೊಂಡಿದ್ದಾರೆ.

ಭಾರತದಲ್ಲಿ ಒಂದೇ ದಿನ 3.60 ಲಕ್ಷ ಕೊರೋನ ವೈರಸ್ ಪ್ರಕರಣಗಳು ಪತ್ತೆಯಾಗಿದೆ. 3,293 ಜನರು ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ ಎರಡು ಲಕ್ಷ ದಾಟಿದೆ.

Join Whatsapp
Exit mobile version