ನವದೆಹಲಿ: ಆಂಡ್ರಾಯ್ಡ್ ಮೊಬೈಲ್ ಸಾಧನಗಳಿಗೆ ಸಂಬಂಧಿಸಿದಂತೆ ಅನೇಕ ಮಾರುಕಟ್ಟೆಗಳಲ್ಲಿ ತನ್ನ ಸ್ಥಾನವನ್ನು ದುರುಪಯೋಗಪಡಿಸಿಕೊಂಡಿದ್ದಕ್ಕಾಗಿ ಗೂಗಲ್ ಗೆ ಭಾರತೀಯ ಸ್ಪರ್ಧಾ ಆಯೋಗವು (ಸಿಸಿಐ) 1,337.76 ಕೋಟಿ ರೂ.ಗಳ ದಂಡವನ್ನು ವಿಧಿಸಿದೆ. ಅಲ್ಲದೆ ಅವ್ಯವಹಾರಗಳನ್ನು ನಿಲ್ಲಿಸಲು ಮತ್ತು ಅದರಿಂದ ದೂರವಿರಲು ಗೂಗಲ್ ಗೆ ಆದೇಶಿಸಿದೆ.
ಮೂರು ವರ್ಷಗಳ ಹಿಂದೆ ವಿವರವಾದ ತನಿಖೆಗೆ ಆದೇಶಿಸಿದ ನಂತರ ಈ ಆದೇಶವನ್ನು ಹೊರಡಿಸಿದ ಆಯೋಗವು, ನಿರ್ದಿಷ್ಟ ಕಾಲಮಿತಿಯೊಳಗೆ ತನ್ನ ನಡವಳಿಕೆಯನ್ನು ಮಾರ್ಪಡಿಸುವಂತೆ ಗೂಗಲ್ ಗೆ ನಿರ್ದೇಶನ ನೀಡಿದೆ ಎಂದು ಭಾರತೀಯ ನಿಯಂತ್ರಕ ಪ್ರಕಟಣೆಯಲ್ಲಿ ತಿಳಿಸಿದೆ.