Home ಟಾಪ್ ಸುದ್ದಿಗಳು JNU ಸಂಘರ್ಷ | ನ್ಯಾಯಾಲಯದ ಆದೇಶವಿಲ್ಲದೆ ಚಾಟ್ ಮಾಹಿತಿಗಳನ್ನು ಪೊಲೀಸರಿಗೆ ಹಸ್ತಾಂತರಿಸುವುದಿಲ್ಲ ಎಂದ ಗೂಗಲ್!

JNU ಸಂಘರ್ಷ | ನ್ಯಾಯಾಲಯದ ಆದೇಶವಿಲ್ಲದೆ ಚಾಟ್ ಮಾಹಿತಿಗಳನ್ನು ಪೊಲೀಸರಿಗೆ ಹಸ್ತಾಂತರಿಸುವುದಿಲ್ಲ ಎಂದ ಗೂಗಲ್!

‘ಯುನಿಟಿ ಎಗೇನ್ಸ್ಟ್ ಲೆಫ್ಟ್’ ಮತ್ತು ‘ಫ್ರೆಂಡ್ಸ್ ಆಫ್ ಆರೆಸ್ಸೆಸ್ಸ್’ ಎಂಬ ಎರಡು ವಾಟ್ಸಾಪ್ ಗ್ರೂಪುಗಳ ಚರ್ಚೆ

ಹೊಸದಿಲ್ಲಿ: ಕೋರ್ಟ್ ಆದೇಶವಿಲ್ಲದೆ ಚಾಟ್ ಮಾಹಿತಿಗಳನ್ನು ನೀಡಲು ಸಾಧ್ಯವಿಲ್ಲ ಎಂದು ದೆಹಲಿ ಪೊಲೀಸರಿಗೆ ಗೂಗಲ್ ತಿಳಿಸಿದೆ. JNU ಸಂಘರ್ಷಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು 33 ಜನರ ಚಾಟ್ ಮಾಹಿತಿಯನ್ನು ಕೋರಿದ್ದರು.

ಪೊಲೀಸರು ಯುನಿಟಿ ಎಗೇನ್ಸ್ಟ್ ಲೆಫ್ಟ್ ಮತ್ತು ಫ್ರೆಂಡ್ಸ್ ಆಫ್ ಆರೆಸ್ಸೆಸ್ಸ್ ಎಂಬ ಎರಡು ವಾಟ್ಸಾಪ್ ಗ್ರೂಪುಗಳ ಸದಸ್ಯರು ನಡೆಸಿದ ಚಾಟ್ ಮಾಹಿತಿಯನ್ನು ಗೂಗಲ್ ಬಳಿ ಕೇಳಿದ್ದರು. ಈ ಸಂಬಂಧ ದೆಹಲಿ ಪೊಲೀಸರು ವಾಟ್ಸಪ್ ಮತ್ತು ಗೂಗಲ್ ಗೆ ಪತ್ರ ಬರೆದಿದ್ದರು. ಇದೀಗ ಗೂಗಲ್ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ.

ಜನವರಿ 5 2020ರಂದು ಜೆಎನ್ ಯುನಲ್ಲಿ ಸಂಘರ್ಷ ನಡೆದಿದ್ದು, ಮುಖವಾಡ ಧರಿಸಿ ಬಂದ ಸುಮಾರು 100 ಮಂದಿ ದುಷ್ಕರ್ಮಿಗಳು ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಮೇಲೆ ಕಬ್ಬಣದ ರಾಡು ಮತ್ತು ಇತರ ಮಾರಕಾಯುಧಗಳಿಂದ ದಾಳಿ ನಡೆಸಿದ್ದರು. ಘಟನೆಯಲ್ಲಿ ಶಿಕ್ಷಕರು ಸೇರಿದಂತೆ 36 ಜನರು ಗಾಯಗೊಂಡಿದ್ದರು. ಆದರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಯಾರನ್ನೂ ಬಂಧಿಸಿಲ್ಲ.

Join Whatsapp
Exit mobile version