ಬರ್ನ್: 200 ಉದ್ಯೋಗಿಗಳನ್ನು ಗೂಗಲ್ ವಜಾಗೊಳಿಸಿರುವ ಹಿನ್ನೆಲೆ ಸ್ವಿಟ್ಜರ್ಲೆಂಡ್ ನ ಜ್ಯೂರಿಯಲ್ಲಿರುವ ಕಂಪನಿಯ ಕಚೇರಿಯಲ್ಲಿ ಇತರ ಉದ್ಯೋಗಿಗಳು ಕೆಲಸವನ್ನು ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದ್ದಾರೆ.
ಗೂಗಲ್ ನ ಮೂಲ ಕಂಪನಿ ಆಲ್ಫಾಬೆಟ್ ಜನವರಿಯಲ್ಲಿ ಪ್ರಪಂಚದಾದ್ಯಂತ ಸುಮಾರು 12,000 ಉದ್ಯೋಗಿಗಳನ್ನು ವಜಾಗೊಳಿಸುವುದಾಗಿ ಘೋಷಿಸಿತ್ತು. ಇದೀಗ ಗೂಗಲ್ ಮತ್ತೆ ಉದ್ಯೋಗಿಗಳನ್ನು ಕಡಿತಗೊಳಿಸುವುದಾಗಿ ಘೋಷಿಸಿದೆ.
ಸುಮಾರು 5,000 ಉದ್ಯೋಗಿಗಳಿರುವ ಗೂಗಲ್ ನ ಜ್ಯೂರಿ ಕಚೇರಿಯಲ್ಲಿ ಕಳೆದ ತಿಂಗಳು ಉದ್ಯೋಗಿಗಳನ್ನು ಕಡಿತಗೊಳಿಸುವುದರ ವಿರುದ್ಧ ಪ್ರತಿಭಟನೆ ನಡೆಸಲಾಗಿತ್ತು.
ವಜಾಗೊಳ್ಳುತ್ತಿರುವ ಉದ್ಯೋಗಿಗಳಿಗೆ ಬೆಂಬಲಿಸಿ ಇತರ ಉದ್ಯೋಗಿಗಳು ಕೆಲಸವನ್ನು ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದ್ದಾರೆ.