ಗೌಪ್ಯತೆ ನಿಬಂಧನೆ ಉಲ್ಲಂಘಿಸಿದ ಗೂಗಲ್: ಬೃಹತ್ ಮೊತ್ತದ ದಂಡ ವಿಧಿಸಿದ ಫ್ರಾನ್ಸ್

Prasthutha|

ಪ್ಯಾರಿಸ್: ಯುರೋಪಿಯನ್ ಒಕ್ಕೂಟದ ಗೌಪ್ಯತೆ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಗೂಗಲ್ ಗೆ 1,264 ರೂ. ಮತ್ತು ಫೇಸ್ ಬುಕ್ ಗೆ 505 ಕೋಟಿ ರೂ. ದಂಡ ವಿಧಿಸಲಾಗಿದೆ ಎಂದು ಫ್ರಾನ್ಸ್ ನ ಮಾಹಿತಿ ಭದ್ರತಾ ಮೇಲ್ವಿಚಾರಕರಾದ ಸಿಎನ್ಐಎಲ್ ತಿಳಿಸಿದೆ.

- Advertisement -

ಇದು ಗೂಗಲ್ ಮೇಲೆ ಸಿಎನ್ ಐಎಲ್ ವಿಧಿಸಿದ ದಾಖಲೆಯ ಮೊತ್ತದ ದಂಡವಾಗಿದೆ. ಆನ್ ಲೈನ್ ಟ್ರ್ಯಾಕರ್ ಗಳಾದ ಕುಕೀಸ್ ಗಳನ್ನು ನಿರಾಕರಿಸಲು ಇಂಟರ್ನೆಟ್ ಬಳಕೆದಾರರಿಗೆ ಕಷ್ಟವಾಗುವಂತೆ ಮಾಡಲು ದಂಡ ವಿಧಿಸಲಾಗುತ್ತದೆ.

ಗೂಗಲ್, ಫೇಸ್ ಬುಕ್ ಮತ್ತು ಯೂಟ್ಯೂಬ್ ಬಳಕೆದಾರರಿಗೆ ಕುಕೀಸ್ ಗಳನ್ನು ಸುಲಭವಾಗಿ ಸ್ವೀಕರಿಸಲು ಅನುಕೂಲ ಮಾಡಿಕೊಟ್ಟಿವೆ. ಆದರೆ ಅವುಗಳನ್ನು ನಿರಾಕರಿಸುವ ಸುಲಭ ಅವಕಾಶವನ್ನು ನೀಡಲಿಲ್ಲ ಎಂದು ಸಿಎನ್ ಐಎಲ್ ಹೇಳಿದೆ.

- Advertisement -

ಈ ರೀತಿ ಬದಲಾಯಿಸಲು ಕಂಪನಿಗಳಿಗೆ ಮೂರು ತಿಂಗಳ ಅವಕಾಶ ನೀಡಲಾಗಿದೆ. ಸಮಸ್ಯೆಯನ್ನು ಈಗಾಗಲೇ ಪರಿಹರಿಸದಿದ್ದರೆ, ವಿಳಂಬದ ಪ್ರತಿದಿನ 84.25 ಲಕ್ಷ ರೂ.ಗಳ ಹೆಚ್ಚುವರಿ ದಂಡವನ್ನು ಪಾವತಿಸಬೇಕಾಗುತ್ತದೆ ಎಂದು ಸಿಸಿಐಎಲ್ ಹೇಳಿದೆ. ಈ ಸಮಸ್ಯೆಯನ್ನು ಶೀಘ್ರದಲ್ಲೇ ಪರಿಹರಿಸಲಾಗುವುದು ಎಂದು ಗೂಗಲ್ ಪ್ರತಿಕ್ರಿಯಿಸಿದೆ.

Join Whatsapp