Home ಟಾಪ್ ಸುದ್ದಿಗಳು ಚಾಲಕನಿಲ್ಲದೇ 70 ಕಿಮೀ ಸಂಚರಿಸಿದ ಗೂಡ್ಸ್ ಟ್ರೈನ್: ತಪ್ಪಿದ ಭಾರೀ ಅನಾಹುತ

ಚಾಲಕನಿಲ್ಲದೇ 70 ಕಿಮೀ ಸಂಚರಿಸಿದ ಗೂಡ್ಸ್ ಟ್ರೈನ್: ತಪ್ಪಿದ ಭಾರೀ ಅನಾಹುತ

ಪಠಾಣಕೋಟ್: ಚಾಲಕನಿಲ್ಲದ ಗೂಡ್ಸ್ ರೈಲೊಂದು ಗಂಟೆಗೆ 100 ಕಿ.ಮೀ ಸ್ಪೀಡ್ ನಲ್ಲಿ ಸುಮಾರು 70 ಕಿಲೋ ಮೀಟರ್ ಸಂಚರಿಸಿದ ಘಟನೆ ಪಂಜಾಬ್ ನಲ್ಲಿ ನಡೆದಿದೆ. ಅದೃಷ್ಟವಶಾತ್, ಈ ಗೂಡ್ಸ್ ರೈನಿಂದಾಗಿ ಯಾವುದೇ ಅವಘಡಗಳು ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ಪಠಾಣ್ಕೋಟ್ ನಿಲ್ದಾಣದಲ್ಲಿ ರೈಲಿನಿಂದ ಇಳಿಯುವ ಮೊದಲು ಚಾಲಕ ಹ್ಯಾಂಡ್ ಬ್ರೇಕ್ ಅನ್ನು ಎಳೆಯಲು ಮರೆತಿರುವುದರಿಂದ ಈ ಪ್ರಮಾದ ನಡೆದಿದೆ. ಹ್ಯಾಂಡ್ ಬ್ರೇಕ್ ಹಾಕದ್ದರಿಂದಾಗಿ ಅದು ಇಳಿಜಾರು ಹಳಿಗಳ ಮೇಲೆ ಚಲಿಸಲು ಪ್ರಾರಂಭಿಸಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ಕಲ್ಲುಗಳಿಂದ ತುಂಬಿದ್ದ ಈ ಗೂಡ್ಸ್ ರೈಲನ್ನು ಉಚ್ಚಿ ಬಸ್ಸಿಯಲ್ಲಿ ನಿಲ್ಲಿಸುವ ಮೊದಲು ಗಂಟೆಗೆ ಸುಮಾರು 100 ಕಿ.ಮೀ. ವೇಗದಲ್ಲಿ ಐದು ನಿಲ್ದಾಣಗಳನ್ನು ದಾಟಿಕೊಂಡು ಬಂದಿತ್ತು. ಇಷ್ಟೊಂದು ವೇಗವಾಗಿ ಚಲಿಸುತ್ತಿದ್ದ ರೈಲನ್ನು ನಿಲ್ಲಿಸುವುದು ಸುಲಭದ ಮಾತಾಗಿರಲಿಲ್ಲ. ಅಂತಿಮವಾಗಿ ರೈಲು ಹಳಿಗಳ ಮೇಲೆ ಮರದ ದಿಮ್ಮಿಗಳನ್ನು ಅಡ್ಡಲಾಗಿ ಇಟ್ಟು, ರೈಲನ್ನು ನಿಲ್ಲಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.


ಈ ಚಾಲಕ ರಹಿತ ಗೂಡ್ಸ್ ರೈಲಿನ ಸಂಚಾರದ ವಿಡಿಯೋ ಕೂಡ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Join Whatsapp
Exit mobile version