Home ಟಾಪ್ ಸುದ್ದಿಗಳು ‘ಗೋಲ್ಡನ್ ಬ್ಯಾಡ್ಜ್’ ಪ್ರಶಸ್ತಿಗೆ ಬೆಂಗಳೂರಿನ ಅಧ್ಯಾಪಕಿ, ಲೇಖಕಿ ಶ್ರೀಕಲಾ ಪಿ. ವಿಜಯನ್ ಭಾಜನ

‘ಗೋಲ್ಡನ್ ಬ್ಯಾಡ್ಜ್’ ಪ್ರಶಸ್ತಿಗೆ ಬೆಂಗಳೂರಿನ ಅಧ್ಯಾಪಕಿ, ಲೇಖಕಿ ಶ್ರೀಕಲಾ ಪಿ. ವಿಜಯನ್ ಭಾಜನ

ಬೆಂಗಳೂರು: ಗುಜರಾತ್ ಸರ್ಕಾರದ ಅಡಿಯಲ್ಲಿ ವಿಶ್ವದ ಶ್ರೇಷ್ಠ ಬರಹಗಾರರ ವೇದಿಕೆ ಮತ್ತು ಗುಜರಾತ್ ಸಾಹಿತ್ಯ ಅಕಾಡೆಮಿ ಕೊಡಮಾಡುವ  ಅತ್ಯಂತ ಪ್ರತಿಷ್ಠಿತ  ‘ಗೋಲ್ಡನ್ ಬ್ಯಾಡ್ಜ್’  ಪ್ರಶಸ್ತಿ ಇದೇ ಮೊದಲ ಬಾರಿಗೆ ದಕ್ಷಿಣ ಭಾರತದ ಅದರಲ್ಲೂ ಬೆಂಗಳೂರಿನ ಲೇಖಕಿ, ಶಿಕ್ಷಣ ತಜ್ಞೆ ಶ್ರೀಕಲಾ ಪಿ.ವಿಜಯನ್ ಅವರಿಗೆ ಸಂದಿದೆ.


ಬೆಂಗಳೂರಿನ ಹೆಸರಘಟ್ಟ ರಸ್ತೆ ಬಾಗಲಗುಂಟೆಯ ಸೌಂದರ್ಯ ಸೆಂಟ್ರಲ್ ಸ್ಕೂಲ್ ನಲ್ಲಿ ಅಧ್ಯಾಪಕಿ ಆಗಿರುವ ಲೇಖಕಿ ಶ್ರೀಕಲಾ ಪಿ.ವಿಜಯನ್ ಅವರ  ಇಂಗ್ಲೀಷ್ ಭಾಷೆಯ ‘ಸೋಲ್ ಇನ್ ಹೋಲ್’ ಪುಸ್ತಕದ ‘ ಅಲಿಷಾ ಜರ್ನಿ’  ಎಂಬ ಕವಿತೆಗೆ ಈ ಪ್ರಶಸ್ತಿಯನ್ನು ನೀಡಲಾಗಿದೆ.


ಗುಜರಾತಿನ ಅಹಮದಾಬಾದ್ ನಿಂದ ನಡೆದ ವರ್ಚುವಲ್ ಕಾರ್ಯಕ್ರಮದಲ್ಲಿ ವಿಶ್ವದ ಪ್ರತಿಷ್ಠಿತ ಬರಹಗಾರರ ವೇದಿಕೆ ಸಂಸ್ಥಾಪಕ ಶಿಜು ಎಚ್. ಪಲ್ಲಿತಾಜೆತ್, ಗುಜರಾತ್ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಡಾ.ವಿಷ್ಣು ಪಾಂಡ್ಯ ಮತ್ತಿತರ ಗಣ್ಯರು ಲೇಖಕಿ ಶ್ರೀಕಲಾ ಪಿ. ವಿಜಯನ್ ಅವರಿಗೆ ‘ಗೋಲ್ಡನ್ ಬ್ಯಾಡ್ಜ್’ ಪ್ರಶಸ್ತಿ ಪ್ರದಾನ ಮಾಡಿದರು.


ಬಳಿಕ ಲೇಖಕಿ ಶ್ರೀಕಲಾ ಪಿ. ವಿಜಯನ್ ಅವರ ಸಾಹಿತ್ಯ ಕೃಷಿ ಹಾಗೂ ಅವರ ಸಾಹಿತ್ಯ ಕೃತಿಗಳ ಮೆಚ್ಚುಗೆ ವ್ಯಕ್ತಪಡಿಸಿದರು.
ಲೇಖಕಿ ಶ್ರೀಕಲಾ ಪಿ ವಿಜಯನ್ ಅವರು, ತಮ್ಮ ಬಾಲ್ಯದ ದಿನಗಳಿಂದಲೂ ಕವಿತೆ ಬರೆಯಲು ಆರಂಭಿಸಿದ ಶಿಕ್ಷಣ ತಜ್ಞೆ. ಆಂಗ್ಲಭಾಷೆಯಲ್ಲಿ ಅಪಾರ ಪ್ರಭುತ್ವದ ಹೊಂದಿರುವ ಅವರು, ಈಗಾಗಲೇ ನೂರಾರು ಕವಿತೆಗಳನ್ನು ಬರೆದಿದ್ದಾರೆ. ಹಲವಾರು ಪುಸ್ತಕಗಳು ಪ್ರಕಟಗೊಂಡಿವೆ. ಅವರ ಕಾವ್ಯಾತ್ಮಕ ಕೆಲಸಗಳಿಗಾಗಿ ಅನೇಕ ಪ್ರಶಸ್ತಿ, ಪುರಸ್ಕಾರಗಳು ಕೂಡ ಸಂದಿವೆ. ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಅವರ ಕವನ ಸಂಕಲನಗಳು ಪ್ರಕಟಗೊಂಡಿವೆ. ಸದ್ಯ  ‘ಅಮೋರಸ್ ಮ್ಯೂಸಿಂಗ್ಸ್’ ಎಂಬ ಕೃತಿ ರಚನೆಯಲ್ಲಿ ಕಾರ್ಯೋನ್ಮುಖರಾಗಿದ್ದಾರೆ.

Join Whatsapp
Exit mobile version