ಕಣ್ಣಾಮುಚ್ಚಾಲೆ ಆಟದ ನೆಪದಲ್ಲಿ ಉದ್ಯಮಿ ಪುತ್ರನ 3.50 ಲಕ್ಷ ಮೌಲ್ಯದ ಚಿನ್ನ ಕಳವು

Prasthutha|

ಬೆಂಗಳೂರು: ಬಾಲಕನನ್ನು ಆಟವಾಡುವ ನೆಪದಲ್ಲಿ ಕರೆದುಕೊಂಡು ಹೋಗಿ ಆತನ ಮೈಮೇಲಿದ್ದ ಮೂರುವರೆ ಲಕ್ಷ ಮೌಲ್ಯದ ಚಿನ್ನಾಭರಣವನ್ನು ದೋಚಿ ಪಾರಾರಿಯಾಗಿರುವ ಘಟನೆ ಮಾಗಡಿ ರಸ್ತೆಯಲ್ಲಿ ನಡೆದಿದೆ.

- Advertisement -


ಮಾಗಡಿ ರಸ್ತೆಯಲ್ಲಿ ಉದ್ಯಮಿ ರಾಘವೇಂದ್ರ, ತನ್ನ ಪತ್ನಿ ಮತ್ತು 6 ವರ್ಷದ ಪುತ್ರನೊಂದಿಗೆ ಸಂಬಂಧಿಕರ ಮನೆಗೆ ಮದುವೆಗೆ ಹೋಗಿದ್ದರು. ಕನ್ವೆನ್ಷನ್ ಹಾಲ್ ನಲ್ಲಿ ಪೋಷಕರು ಬ್ಯುಜಿಯಾದಂತೆ, ಉದ್ಯಮಿ ಪುತ್ರ ಇತರೆ ಮಕ್ಕಳ ಜೊತೆಗೆ ಆಟವಾಡುತ್ತಿದ್ದ.
ಈ ವೇಳೆ ಅಲ್ಲೇ ಇದ್ದ ಇಬ್ಬರು, ಅಪರಿಚಿತ ಯುವಕರು, ಕಣ್ಣಾಮುಚ್ಚಾಲೆ ಆಡೋಣ ಎಂದು ಬಾಲಕನನ್ನು ಕರೆದುಕೊಂಡು ಹೋಗಿ. ಕಣ್ಣಾಮುಚ್ಚಾಲೆ ಆಟದ ನೆಪದಲ್ಲಿ ಬಾಲಕನ ಮೈಮೇಲಿದ್ದ ಸುಮಾರು ಮೂರುವರೇ ಲಕ್ಷ ಮೌಲ್ಯದ ಚಿನ್ನಾಭರಣವನ್ನು ಕಸಿದು ಪರಾರಿಯಾಗಿದ್ದಾರೆ.


ಪುತ್ರ ಆಳುತ್ತ ತನ್ನ ತಂದೆಯ ಬಳಿ ಬಂದಾಗ ಚಿನ್ನಭರಣ ಕಳವಾಗಿರುವ ವಿಚಾರ ಬೆಳಕಿಗೆ ಬಂದಿದೆ. ಈ ಸಂಬಂಧ ಗೋವಿಂದ ರಾಜನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ. ತನಿಖೆ ವೇಳೆ ಸಿಸಿಟಿವಿ ಪರಿಶೀಲನೆ ನಡೆಸಿದ ಪೊಲೀಸರಿಗೆ ಇಬ್ಬರು ಅಪರಿಚಿತ ಯುವಕರು ಮದುವೆ ಮಧ್ಯದಲ್ಲಿ ಬೈಕ್ ನಲ್ಲಿ ಅನುಮಾನಾಸ್ಪದವಾಗಿ ಹೊರಗೆ ಹೋಗಿರುವ ದೃಶ್ಯ ಸೆರೆಸಿಕ್ಕಿದ್ದು, ಆರೋಪಿಗಳ ಪತ್ತೆಗೆ ಬಲೆಬೀಸಿದ್ದಾರೆ.



Join Whatsapp