ಬೆಂಗಳೂರು: ನಿನ್ನೆ ಕುಸಿತ ಕಂಡಿದ್ದ ಚಿನ್ನದ ಬೆಲೆ ಇವತ್ತು ಏರಿಕೆಯಾಗಿದೆ. ಬೆಳ್ಳಿ ಬೆಲೆ ಒಮ್ಮೆಲೇ ಗ್ರಾಮ್ ಗೆ ಎರಡು ರೂನಷ್ಟು ಜಿಗಿದಿದೆ. ಇವತ್ತು ಬುಧವಾರ ಚಿನ್ನದ ಬೆಲೆ ಗ್ರಾಮ್ ಗೆ 45 ರೂನಷ್ಟು ಹೆಚ್ಚಳವಾದರೆ, ಅಪರಂಜಿ ಚಿನ್ನದ ಬೆಲೆ 49 ರೂನಷ್ಟು ದುಬಾರಿಯಾಗಿದೆ. ಭಾರತದಲ್ಲಿ ಮಾತ್ರವಲ್ಲ, ಜಾಗತಿಕವಾಗಿ ಹಲವು ದೇಶಗಳಲ್ಲಿ ಚಿನ್ನದ ಬೆಲೆ ಹೆಚ್ಚಳಗೊಂಡಿದೆ.
- Advertisement -
ಬೆಂಗಳೂರಿನಲ್ಲಿ ಬೆಳ್ಳಿ ಬೆಲೆ ಎರಡು ರೂ ಹೆಚ್ಚಳ ಆಗಿದೆ. 98 ರೂ ಇದ್ದ ಅದರ ಬೆಲೆ 100 ರೂ ಮುಟ್ಟಿದೆ.
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
• 22 ಕ್ಯಾರಟ್ ನ 10 ಗ್ರಾಂ ಚಿನ್ನದ ಬೆಲೆ: 80,650 ರೂ
• 24 ಕ್ಯಾರಟ್ ನ 10 ಗ್ರಾಂ ಚಿನ್ನದ ಬೆಲೆ: 87,980 ರೂ
• ಬೆಳ್ಳಿ ಬೆಲೆ 10 ಗ್ರಾಂಗೆ: 1,000 ರೂ