ಚಿನ್ನದ ಬೆಲೆ ತೀವ್ರ ಕುಸಿತ: ಇಲ್ಲಿದೆ ಇವತ್ತಿನ ದರಪಟ್ಟಿ

- Advertisement -

ಬೆಂಗಳೂರು: ಬುಧವಾರ ಆಭರಣ ಚಿನ್ನದ ಬೆಲೆ ಗ್ರಾಮ್​​ ಗೆ 275 ರೂನಷ್ಟು ಕಡಿಮೆ ಆಗಿದೆ. ಅಪರಂಜಿ ಚಿನ್ನದ ಬೆಲೆ 300 ರೂ ತಗ್ಗಿದೆ. 9,290 ರೂ ಇದ್ದ 22 ಕ್ಯಾರಟ್ ಚಿನ್ನದ ಬೆಲೆ 9,015 ರೂಗೆ ಇಳಿದಿದೆ.

- Advertisement -

ಅಪರಂಜಿ ಚಿನ್ನವೂ ಕೂಡ 10,000 ಗಡಿಯೊಳಗೆ ಇಳಿದಿದೆ. ವಿದೇಶಗಳಲ್ಲಿ ಕೆಲವೆಡೆ ಚಿನ್ನದ ಬೆಲೆ ಅಲ್ಪ ಏರಿಕೆಯಷ್ಟೇ ಕಂಡಿದೆ. ಬೆಳ್ಳಿ ಬೆಲೆ ಯಥಾಸ್ಥಿತಿ ಮುಂದುವರಿದಿದೆ.

ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 90,150 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 98,350 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 10,100 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 90,150 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 10,100 ರುಪಾಯಿಯಲ್ಲಿ ಇದೆ.

- Advertisement -

ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಏಪ್ರಿಲ್ 23ಕ್ಕೆ)
22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 90,150 ರೂ
24 ಕ್ಯಾರಟ್ ​ನ 10 ಗ್ರಾಂ ಚಿನ್ನದ ಬೆಲೆ: 98,350 ರೂ
18 ಕ್ಯಾರಟ್ ​ನ 10 ಗ್ರಾಂ ಚಿನ್ನದ ಬೆಲೆ: 73,760 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 1,010 ರೂ.

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
22 ಕ್ಯಾರಟ್​ ನ 10 ಗ್ರಾಂ ಚಿನ್ನದ ಬೆಲೆ: 90,150 ರೂ
24 ಕ್ಯಾರಟ್ ​ನ 10 ಗ್ರಾಂ ಚಿನ್ನದ ಬೆಲೆ: 1,01,350 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 1,010 ರೂ

- Advertisement -


Must Read

Related Articles