Home ಟಾಪ್ ಸುದ್ದಿಗಳು ಚಿನ್ನದ ಪದಕ ವಿಜೇತ ‘ಮಗಾವ’ ಇಲಿ ಇನ್ನಿಲ್ಲ

ಚಿನ್ನದ ಪದಕ ವಿಜೇತ ‘ಮಗಾವ’ ಇಲಿ ಇನ್ನಿಲ್ಲ

ಕಾಂಬೋಡಿಯಾ: ನೂರಕ್ಕೂ ಹೆಚ್ಚು ನೆಲಬಾಂಬ್‌ ಹಾಗೂ ಸ್ಫೋಟಕಗಳನ್ನು ಪತ್ತೆ ಹಚ್ಚಿ ಸಾವಿರಾರು ಮಂದಿಯನ್ನು ಪ್ರಾಣಾಪಾಯದಿಂದ ಪಾರು ಮಾಡಿದ ‘ಮಗಾವ’ ಎಂಬ ಇಲಿ ಸಾವನ್ನಪ್ಪಿದೆ. ಪರಿಣಿತಿ ಹೊಂದಿದ್ದ ಈ ಇಲಿಯು ಇದೀಗ ಸಾವಿರಾರು ಮಂದಿಯ ಜೀವ ಉಳಿಸಿದ ಧನ್ಯತೆಯೊಂದಿಗೆ ಕೊನೆಯುಸಿರೆಳೆದಿದೆ.


ಅಂತಾರಾಷ್ಟ್ರೀಯ ದತ್ತಿ ಸಂಸ್ಥೆ ಅಪೋಪೊ (APOPO) ದ ಸುಪರ್ದಿಯಲ್ಲಿದ್ದ ಈ ಇಲಿ ವಯೋಸಹವಾಗಿ ತನ್ನ ಎಂಟನೇ ವಯಸ್ಸಿನಲ್ಲಿ ಮೃತ ಪಟ್ಟಿದೆ. ಕಾಂಬೋಡಿಯಾವು ವಿಶ್ವದಲ್ಲೇ ಅತೀ ಹೆಚ್ಚು ನೆಲ ಬಾಂಬ್‌ ದಾಳಿಗೊಳಗಾದ ರಾಷ್ಟ್ರಗಳಲ್ಲಿ ಒಂದಾಗಿದೆ. ದಶಕಗಳ ಕಾಲ ನಾಗರಿಕ ಯುದ್ಧಕ್ಕೆ ತುತ್ತಾಗಿದ್ದ ಕಾಂಬೋಡಿಯಾದಲ್ಲಿ ನೆಲ ಬಾಂಬ್‌ ದಾಳಿಗೆ ಸಾವಿರಾರು ಮಂದಿ ಜೀವ ಕಳೆದುಕೊಂಡಿದ್ದರು.


ಉತ್ತಮ ಆರೋಗ್ಯದಿಂದ ಇದ್ದ ಮಗಾವ ಉತ್ಸಾಹದಿಂದಲೇ ಆಟವಾಡುತ್ತಿತ್ತು. ಆದರೆ ವಾರಾಂತ್ಯದ ವೇಳೆಗೆ ಯಾವುದೇ ಆಹಾರ ಸೇವಿಸದೇ ಸೊರಗಿ ಎಲ್ಲದರಲ್ಲಿಯೂ ಆಸಕ್ತಿ ಕಳೆದುಕೊಂಡಿತ್ತು ಎಂದು ಅಪೋಪೋ ಸಂಸ್ಥೆಯು ಪ್ರಕಟನೆಯಲ್ಲಿ ತಿಳಿಸಿದೆ . ಆಫ್ರಿಕನ್‌ ಪ್ರಭೇದದ ಈ ‘ಮಗಾವ’ ಒಟ್ಟು 5 ವರ್ಷಗಳ ಕಾಲ ನೆಲಬಾಂಬ್ ಪತ್ತೆಹಚ್ಚುವ ಕಾರ್ಯ ನಿರ್ವಹಿಸಿತ್ತು. 2020ರಲ್ಲಿ ಬ್ರಿಟನ್‌ನ ಪ್ರಾಣಿ ಸಂಕಕ್ಷಣಾ ಸಂಸ್ಥೆಯು ‘ಮಗಾವಾ’ ಗೆ ಜೀವ ಉಳಿಸುವ ಶೌರ್ಯ ಮತ್ತು ಕರ್ತವ್ಯ ಪ್ರಜ್ಞೆಗೆ ಚಿನ್ನದ ಪದಕ ನೀಡಿ ಗೌರವಿಸಿತ್ತು.

ನಾಗರಿಕ ಯುದ್ಧವಾದುದರಿಂದ ಕಾಂಬೋಡಿಯಾದಲ್ಲಿ ನೆಲಬಾಂಬ್‌ಗಳ ಸ್ಫೋಟ ಸಾಮಾನ್ಯವಾಗಿದ್ದು, ವಿಶ್ವದಲ್ಲಿ ಅತೀ ಹೆಚ್ಚು ಅಂಗವಿಕಲರು ಇರುವ ದೇಶ ಎನ್ನುವ ಅಪಖ್ಯಾತಿ ಹೊಂದಿದೆ. ಇಂತಹ ಸ್ಪೋಟಗಳಿಂದಾಗಿ ಸುಮಾರು 40,000 ಸಾವಿರ ಮಂದಿ ತಮ್ಮ ಕೈ ಕಾಲುಗಳನ್ನು ಕಳೆದುಕೊಂಡಿದ್ದಾರೆ.

Join Whatsapp
Exit mobile version