ನವದೆಹಲಿ: “ಚಿನ್ನದ ಹುಡುಗ” ನೀರಜ್ ಚೋಪ್ರಾ ಪರಮ ವಿಶಿಷ್ಟ ಸೇವಾ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಟೋಕಿಯೋ ಒಲಿಂಪಿಕ್ಸ್’ನ ಚಿನ್ನದ ಪದಕ ವಿಜೇತ, 4 ರಜಪೂತನ ರೈಫಲ್ಸ್’ನ ಸುಬೇದಾರ್ ನೀರಜ್ ಚೋಪ್ರಾರಿಗೆ ಗಣರಾಜ್ಯೋತ್ಸವ ದಿನದಂದು ಪರಮ ವಿಶಿಷ್ಟ ಸೇವಾ ಪ್ರಶಸ್ತಿ ಪ್ರಧಾನ ಮಾಡಲಾಗುವುದು ಎಂದು ANI ಸುದ್ದಿಸಂಸ್ಥೆ ಟ್ವೀಟ್ ಮಾಡಿದೆ.
73ನೇ ಗಣರಾಜ್ಯೋತ್ಸವದ ಸಂದರ್ಭದಲ್ಲಿ ನೀರಜ್ ಚೋಪ್ರಾ ಸೇರಿದಂತೆ ಒಟ್ಟು 384 ಜನರಿಗೆ ಶೌರ್ಯ ಪ್ರಶಸ್ತಿಗಳನ್ನ ಘೋಷಿಸಲಾಗಿದೆ.
12 ಶೌರ್ಯ ಚಕ್ರ, 29 ಪರಮ್ ವಿಶಿಷ್ಟ್ ಸೇವಾ ಪದಕ, 4 ಉತ್ತಮ್ ಯುದ್ಧ್ ಸೇವಾ ಪದಕ, 53 ವಿಶಿಷ್ಟ ಸೇವಾ ಪದಕ, 13 ಯುಧ್ ಸೇವಾ ಪದಕಗಳು ಇದರಲ್ಲಿ ಸೇರಿವೆ. ಇದಲ್ಲದೆ, 122 ವಿಶಿಷ್ಟ ಸೇವಾ ಪದಕ 81 ಸೇನಾ ಪದಕ (ಶೌರ್ಯ), 2 ವಾಯು ಸೇನಾ ಪದಕ, 40 ಸೇನಾ ಪದಕಗಳು, 8 ನೌಕಾ ಪದಕ, 14 ವಾಯು ಸೇನಾ ಪದಕಗಳು (ಕರ್ತವ್ಯನಿಷ್ಠೆ) ಒಳಗೊಂಡಿದೆ.